ಸ್ಪೇನ್ : ಮಾನವ ಅಂಗಾಂಗಗಳ ಕುರಿತು ಪಾಠ ಮಾಡಲು ಶಿಕ್ಷಕಿಯೊಬ್ಬಳು ಮಾನವನ ಅಂಗ ರಚನೆ ಇರುವಂತಹ ಸೂಟ್ ನ್ನು ಧರಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾಳೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೆರೋನಿಕಾ ಡ್ಯೂಕ್ (43) ಸ್ಪೇನ್ ನ ಶಾಲೆಯೊಂದರಲ್ಲಿ ಜೀವಶಾಸ್ತ್ರದ ಶಿಕ್ಷಕಿಯಾಗಿದ್ದು, 3ನೇ ತರಗತಿಯ ಮಕ್ಕಳಿಗೆ ಮಾನವ ಅಂಗಾಂಗಗಳ ರಚನೆಯ ಬಗ್ಗೆ ತಿಳಿಸಲು ಮಾನವನ ಅಂಗ ರಚನೆ ಇರುವಂತಹ ಸೂಟ್ ನ್ನು ಧರಿಸಿ ಪಾಠ ಮಾಡಿದ್ದಾಳೆ. ಇದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕಲಿಯಬಹುದೆಂಬುದು ಆಕೆಯ ಅಭಿಪ್ರಾಯ.
ಶಿಕ್ಷಕಿಯ ಪತಿ ಆಕೆ ಪಾಠ ಮಾಡುತ್ತಿರುವ ಶೈಲಿಯನ್ನು ಪೋಟೊ ತೆಗೆದು ಟ್ವೀಟರ್ ನಲ್ಲಿ ಫೋಸ್ಟ್ ಮಾಡಿದ್ದಾರೆ. ಶಿಕ್ಷಕಿಯ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.