Publish Date: Mon, 09 Dec 2019 (19:14 IST)
Updated Date: Mon, 09 Dec 2019 (19:15 IST)
ಪ್ರಶ್ನೆ: ನನಗೆ ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳಾಗಿವೆ. ನನಗೆ ಕಾರ್ಯಕ್ರಮಗಳಲ್ಲಿ ಹಾಡುವುದೆಂದರೆ ತುಂಬಾ ಖುಷಿ. ಹೀಗೆ ನಾನು ಹಾಡುವ ಹಲವು ಕಾರ್ಯಕ್ರಮಗಳಿಗೆ ಶಿಕ್ಷಕಿಯೊಬ್ಬಳು ತಪ್ಪದೇ ಬರುತ್ತಿದ್ದಳು.
ಇಬ್ಬರೂ ಕ್ರಮೇಣ ಪರಿಚಯವಾಗಿ ಪ್ರೇಮದಾಟ, ಪಲ್ಲಂಗದಾಟ ಶುರುಮಾಡಿದ್ದೇವೆ. ನಾವಿಬ್ಬರೂ ಸರಕಾರಿ ನೌಕರರೇ. ಮೊದಲ ಪತ್ನಿಗೆ ಎರಡು ಮಕ್ಕಳಿದ್ದರೆ ಎರಡನೇ ಶಿಕ್ಷಕಿಗೆ ಒಂದು ಮಗುವಿದೆ. ನನ್ನ ಅನೈತಿಕ ಸಂಬಂಧ ಕಾರಣದಿಂದ ನಿತ್ಯ ಮನೆಯಲ್ಲಿ ಜಗಳ ವಾಗುತ್ತಿದೆ. ಪರಿಹಾರ ತಿಳಿಸಿ.
ಉತ್ತರ: ಮೊದಲ ಪತ್ನಿ ಬದುಕಿರುವಾಗ ಎರಡನೇ ಮದುವೆ ಮಾಡಿಕೊಳ್ಳುವಂತಿಲ್ಲ. ಇಬ್ಬರೂ ಸರಕಾರಿ ನೌಕರರಾಗಿದ್ದರೂ ಏಕೆ ಇಂಥ ರಿಸ್ಕ್ ತೆಗೆದುಕೊಂಡಿದ್ದೀರಿ ಎನ್ನೋದು ಗೊತ್ತಾಗುತ್ತಿಲ್ಲ. ಹಿರಿಯರಿಂದ ಶಿಕ್ಷಕಿಗೆ ಮಾರ್ಗದರ್ಶನ ಕೊಡಿಸಿ. ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ.