Publish Date: Sun, 08 Dec 2019 (19:51 IST)
Updated Date: Sun, 08 Dec 2019 (19:55 IST)
ಪ್ರಶ್ನೆ: ನಮ್ಮದು ಖಾಸಗಿ ಪ್ರಾಥಮಿಕ ಶಾಲೆಯಿದೆ. ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ಸಂಜೆ ವೇಳೆ ಟ್ಯೂಷನ್ ತೆಗೆದುಕೊಳ್ಳುತ್ತಾಳೆ.
ಆಗ ಅವಳ ಮನೆಯಲ್ಲಿ ಯಾರೂ ಇರೋದಿಲ್ಲ. ಅದೇ ಸಂದರ್ಭದಲ್ಲಿ ನಿತ್ಯ ಬೇರೆ ಬೇರೆ ವಿದ್ಯಾರ್ಥಿಯನ್ನು ಕರೆಸಿಕೊಂಡು ಪ್ರೇಮದಾಟದಲ್ಲಿ ತೊಡಗುತ್ತಿದ್ದಾಳೆ.
ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು? ಪರಿಹಾರ ಇದ್ದರೆ ತಿಳಿಸಿ.
ಉತ್ತರ: ಶಾಲೆಯ ಶಿಕ್ಷಕ, ಶಿಕ್ಷಕಿಯರ ಮಾತು ಹಾಗೂ ಅವರ ನಡೆನುಡಿಗಳನ್ನು ಬಹಳಷ್ಟು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಆ ಶಿಕ್ಷಕಿಗೆ ಪ್ರೇಮಪಾಠ ಬೇಕು ಎಂದರೆ ಶಾಲೆ ಬಿಟ್ಟು ಹೊರಗೆ ಹೋಗಿ ಎಂದು ನೇರವಾಗಿ ಹೇಳಿ.
ನಿಮ್ಮದು ಖಾಸಗಿ ಶಾಲೆಯಾದ್ದರಿಂದ ಆ ಶಿಕ್ಷಕಿಯನ್ನು ಕೆಲಸದಿಂದ ಬಿಡಿಸಿದರೂ ಯಾವುದೇ ತೊಂದರೆ ಇಲ್ಲ. ಆ ಶಿಕ್ಷಕಿಯಂತೆ ಉಳಿದ ಶಿಕ್ಷಕಿಯರು ಹಾಗೂ ಮಕ್ಕಳು ದಾರಿ ಹಿಡಿದರೆ ತುಂಬಾ ಕಷ್ಟವಾಗುತ್ತದೆ.