ಪಾಕಿಸ್ತಾನ : ಸೆ. 21 ರ ವಿಶ್ವ ಶಾಂತಿ ದಿನದ ಅಂಗವಾಗಿ ಶಾಂತಿ ಸೌಹಾರ್ದಕ್ಕೆ ಸಂಬಂಧಪಟ್ಟಂತೆ ವಾರ್ಷಿಕ ಜಾಗತಿಕ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಪಾಕಿಸ್ತಾನವು 163 ದೇಶಗಳ ಪೈಕಿ 153 ನೇ ಸ್ಥಾನದಲ್ಲಿ ಇದೆ, ಈ ಮೂಲಕ ಟಾಪ್ 10 ಹಿಂಸಾತ್ಮಕ ದೇಶಗಳಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಪಡೆದುಕೊಂಡಿದೆ. ಅಲ್ಲದೇ ಕಳೆದ ಬಾರಿಯ ವರದಿಗೆ ಹೋಲಿಸಿದರೆ ಪಾಕಿಸ್ತಾನವು ಎರಡು ಸ್ಥಾನ ಹಿಂಬಡ್ತಿ ಪಡೆದಂತಾಗಿದೆ.
ಶಾಂತಿ ಸೌಹಾರ್ದ ಪಟ್ಟಿಯಲ್ಲಿ ಐಸ್ ಲ್ಯಾಂಡ್ ನಂಬರ್ 1 ಸ್ಥಾನವನ್ನು ಪಡೆಯುವುದರ ಮೂಲಕ ವಿಶ್ವದ ಅತ್ಯಂತ ಶಾಂತಿಯುತ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಲ್ಲದೆ ಪ್ರಕೃತಿ ವಿಕೋಪಗಳ ಪಟ್ಟಿಯಲ್ಲಿ ಭಾರತ ಸೇರಿದಂತೆ ಫಿಲಿಪೈನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೊನೇಷ್ಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಟಾಪ್ 10 ಸ್ಥಾನಗಳ ಪಟ್ಟಿಯಲ್ಲಿವೆ ಎನ್ನಲಾಗಿದೆ.