ಬೆಂಗಳೂರು : ಬಿ.ಎಸ್.ಎನ್.ಎಲ್ ಸಂಸ್ಥೆ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ತನ್ನ 899 ರೂ. ಬೆಲೆಯ ಪ್ಲಾನ್ ಅನ್ನು ಸಡಿಲಗೊಳಿಸಿದೆ.
ಬಿ.ಎಸ್.ಎನ್.ಎಲ್ ಗ್ರಾಹಕರಿಗಾಗಿ ತನ್ನ 899 ರೂ. ಬೆಲೆಯ ಪ್ಲಾನ್ ಅನ್ನು ಸಡಿಲಗೊಳಿಸಿ 799 ರೂ. ಗೆ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಗ್ರಾಹಕರಿಗೆ 100 ರೂ. ಡಿಸ್ಕೌಂಟ್ ನೀಡುತ್ತಿದೆ. ಈ ನೂತನ ಪ್ಲಾನ್ ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದವರಿಗೆ ಮಾತ್ರ ಲಭ್ಯವಿದೆ.
ಈ 799 ರೂ. ಪ್ರಿಪೇಯ್ಡ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿದಿನ 1.5GB ಡೇಟಾವನ್ನು ಉಚಿತವಾಗಿ ಸಿಗಲಿದೆ. ಜೊತೆಗೆ ಅನಿಯಮಿತ ಲೋಕಲ್/ಎಸ್ ಟಿಡಿ ಕರೆಯನ್ನು ನೀಡಿದೆ. ಹಾಗೇ ಪ್ರತಿ ದಿನ 50 SMS ಗಳನ್ನು ಉಚಿತವಾಗಿ ನೀಡುತ್ತಿದೆ. ಈ ಪ್ಲಾನ್ 180 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.