ನವದೆಹಲಿ: ಡೋಕ್ಲಾಂ ಗಡಿ ವಿವಾದ ಮತ್ತೆ ಭುಗಿಲೇಳುವ ಲಕ್ಷಣ ಕಾಣುತ್ತಿದೆ. ಡೋಕ್ಲಾಂ ಗಡಿಯಲ್ಲಿ ಚೀನಾ ಮಿಲಿಟರಿ ಚಟುವಟಿಕೆ ನಡೆಸುತ್ತಿದೆ ಎಂದು ಇತ್ತೀಚೆಗೆ ಸ್ಯಾಟ್ ಲೈಟ್ ಫೋಟೋಗಳು ಬಿಡುಗಡೆಯಾದ ಬೆನ್ನಲ್ಲೇ ಭಾರತವನ್ನು ಕೆಣಕುವಂತಹ ಹೇಳಿಕೆಯನ್ನು ಚೀನಾ ನೀಡಿದೆ.
ಡೋಕ್ಲಾಂ ನಮ್ಮದು. ಆ ಗಡಿ ಭಾಗದಲ್ಲಿ ಯಾವುದೇ ಕಟ್ಟಡ, ಕಾಮಗಾರಿ ನಡೆಸುವ ಹಕ್ಕು ನಮಗಿದೆ. ಈ ವಿಚಾರದಲ್ಲಿ ಭಾರತ ತಗಾದೆ ತೆಗೆಯುವಂತಿಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟವಾಗಿ ಹೇಳಿದೆ.
ಇಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿ ನ್ಯಾಯಸಮ್ಮತವಾಗಿದೆ ಎಂದು ಅದು ಸಮರ್ಥಿಸಿಕೊಂಡಿದೆ. ಡೋಕ್ಲಾಂ ವಿವಾದಿತ ಗಡಿ ಭಾಗದಲ್ಲಿ ಈಗಾಗಲೇ ಚೀನಾ ಸೇನಾ ಬಂಕರ್ ಗಳು, ಹೆಲಿಪ್ಯಾಡ್ ಗಳನ್ನು ನಿರ್ಮಿಸಿದೆ ಎಂದು ವರದಿಗಳು ಬಂದ ಬೆನ್ನಲ್ಲೇ ಚೀನಾದಿಂದ ಈ ಹೇಳಿಕೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ