Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಚ್ಚಿದ ಗಾಜಿನ ನಡುವೆ ಕುಟುಂಬದವರನ್ನು ಕಣ್ತುಂಬಿಕೊಂಡ ಕುಲಭೂಷಣ್ ಜಾದವ್

ಮುಚ್ಚಿದ ಗಾಜಿನ ನಡುವೆ ಕುಟುಂಬದವರನ್ನು ಕಣ್ತುಂಬಿಕೊಂಡ ಕುಲಭೂಷಣ್ ಜಾದವ್
ಇಸ್ಲಾಮಾಬಾದ್ , ಮಂಗಳವಾರ, 26 ಡಿಸೆಂಬರ್ 2017 (10:31 IST)
ಇಸ್ಲಾಮಾಬಾದ್: ಕೊನೆಗೂ ಪಾಕಿಸ್ತಾನ ಭಾರತೀಯ ಖೈದಿ ಕುಲಭೂಷಣ್ ಜಾದವ್ ಗೆ ಕುಟುಂಬದವರನ್ನು ಭೇಟಿಯಾಗಲು ಅವಕಾಶ ಕೊಟ್ಟಿದೆ.
 

ಮುಚ್ಚಿದ ಗಾಜಿನ ಬಾಗಿಲ ಮಧ್ಯೆ ಪಾಕ್ ವಿದೇಶಾಂಗ ಇಲಾಖೆ ಕಚೇರಿಯಲ್ಲಿ ಕುಲಭೂಷಣ್ ಜಾದವ್ ಮತ್ತು ಅವರ ಪತ್ನಿ, ತಾಯಿ ನಡುವೆ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಪಾಕ್ ಅಧಿಕಾರಿಗಳು ಕಚೇರಿ ಸುತ್ತ ಬಿಗಿ ಭದ್ರತೆ ಏರ್ಪಡಿಸಿದ್ದರು.

ಅಷ್ಟೇ ಅಲ್ಲದೆ, ಅಪಾರ ಸಂಖ್ಯೆಯಲ್ಲಿ ಮಾಧ್ಯಮ ಪ್ರತಿನಿಧಿಗಳೂ ಇಲ್ಲಿ ನೆರೆದಿದ್ದರು. ಭಾರತೀಯ ರಾಯಭಾರಿ ಕಚೇರಿಯ ಡೆಪ್ಯುಟಿ ಹೈಕಮಿಷನರ್ ಜೆಪಿ ಸಿಂಗ್ ಕುಲಭೂಷಣ್ ಪತ್ನಿ ಮತ್ತು ತಾಯಿಯನ್ನು ಕರೆದೊಯ್ದರು.

ಈ ಕ್ಷಣದ ಫೋಟೋವನ್ನು ಪಾಕ್ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದೆ. ಹಲವು ವರ್ಷಗಳ ನಂತರ ಪತ್ನಿ, ತಾಯಿಯನ್ನು ನೋಡಿ ಕುಲಭೂಷಣ್ ಜಾದವ್ ಭಾವೋದ್ವೇಗಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಂಸದೀಯ ಕಾರ್ಯದರ್ಶಿ ತುಕಾರಾಂ ವಿರುದ್ದ ಕಿಕ್ ಬ್ಯಾಕ್ ಆರೋಪ