ಪಾಕಿಸ್ತಾನದಲ್ಲಿಯೇ ನೆಲೆಸಿರುವ ದಾವುದ್ ಸಹಚರ ಛೋಟಾ ಶಕೀಲ್, ಡಿ ಕಂಪೆನಿಯೊಂದಿಗೆ ಸಂಪರ್ಕ ಹೊಂದಿರುವ ದುಬೈ ಮೂಲದ ಉದ್ಯಮಿಯೊಬ್ಬರಿಗೆ ಕರೆ ಮಾಡಿ, ದಾವುದ್ ಜನ್ಮದಿನಾಚರಣೆ ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾನೆ ಎಂದು ತಿಳಿಸಿವೆ.
ದಾವೂದ್ ತನ್ನ ಹುಟ್ಟು ಹಬ್ಬವನ್ನು ಪಾಕಿಸ್ತಾನ ಅಥವಾ ದುಬೈನಲ್ಲಿ ಆಚರಿಸಲು ನಿರ್ಧರಿಸಿದ್ದು, ಸುಮಾರು 600 ಅತಿಥಿಗಳಿಗೆ ಪಾರ್ಟಿಗೆ ಆಹ್ವಾನಿಸಿದ್ದಾನೆ ಎಂದು ದೇಶದ ಗುಪ್ತಚರ ಸಂಸ್ಥೆಗಳು ಬಹಿರಂಗಪಡಿಸಿವೆ.
ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಭೂಗತ ದೊರೆ ದಾವುದ್ ಇಬ್ರಾಹಿಂ, ಡಿಸೆಂಬರ್ 26 ರಂದು ತನ್ನ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚರಿಸಲು ನಿರ್ಧರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ತಮ್ಮ ದೇಶದಲ್ಲಿ ದಾವೂದ್ ಇಬ್ರಾಹಿಂ ನೆಲೆಸಿಲ್ಲ ಎಂದು ನಿರಂತರವಾಗಿ ವಾದಿಸುತ್ತಿದೆ. ಆದರೆ, ದಾವೂದ್ ಪಾಕಿಸ್ತಾನದಲ್ಲಿಯೇ ವಾಸವಾಗಿದ್ದಾನೆ ಎಂದು ಭಾರತ ತಿರುಗೇಟು ನೀಡುತ್ತಿದೆ.
ದಾವೂದ್ ಭೇಟಿಗಾಗಿ ಕುಟುಂಬದ ಸದಸ್ಯರು ಪಾಕಿಸ್ತಾನ ಮತ್ತು ದುಬೈಗೆ ಹಲವಾರು ಬಾರಿ ತೆರಳಿರುವ ಬಗ್ಗೆ ಮಾಹಿತಿಯಿದೆ. ದಾವೂದ್ ಪಾಕಿಸ್ತಾನ ಪಾಸ್‌ಪೋರ್ಟ್ ಕೂಡಾ ಲಭ್ಯವಾಗಿದೆ ಎಂದು ಗುಪ್ತಚರ ದಳ ಅಧಿಕಾರಿಗಳು ತಿಳಿಸಿದ್ದಾರೆ.