ನವದೆಹಲಿ: ಕಳೆದ ಆರು ತಿಂಗಳಿನಿಂದ ಚೀನಾ ಭಾರತಕ್ಕೆ ಹೊಂದಿಕೊಂಡ ಗಡಿ ಪ್ರದೇಶಗಳಲ್ಲಿ ಸೇನಾ ಚಟವಟಿಕೆ ಚುರುಕುಗೊಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಭಾರತೀಯ ಸೇನೆ ಹದ್ದಿನಗಣ್ಣಿರಿಸಿದೆ.
ಉತ್ತರಾಖಂಡದ ಬಾರಾಹಟಿಯಲ್ಲಿ ಸುಮಾರು 40 ಮಂದಿ ಚೀನಾ ಯೋಧರ ಗುಂಪು ಓಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈ ಭಾಗದಲ್ಲಿ ಬಹಳ ದಿನಗಳ ನಂತರ ಚೀನಾ ಸೇನೆ ಓಡಾಟ ನಡೆಸಿದೆ.
ಕಳೆದ ವರ್ಷ ಚೀನಾ ಸೇನೆಯೊಂದಿಗೆ ನಡೆದ ಸಂಘರ್ಷದ ಬಳಿಕ ಭಾರತವೂ ಈ ಭಾಗದಲ್ಲಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಿದೆ. ಹೀಗಾಗಿ ಚೀನಾ ಸೇನೆ ಇಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.