ನವದೆಹಲಿ : ಕೊರೊನಾ ವಿಶ್ವವ್ಯಾಪಿ ಮತ್ತೆ ಸದ್ದು ಮಾಡುತ್ತಿದೆ. ಕೋವಿಡ್-19 ಹೊಸ ವಿಶ್ವ ದಾಖಲೆ ಬರೆದಿದೆ.
ಚೀನಾದಲ್ಲಿ ಶೂನ್ಯ ಕೋವಿಡ್ಗಾಗಿ ಚಿತ್ರ ವಿಚಿತ್ರ ಕಾನೂನುಗಳು ಜಾರಿ ಆಗ್ತಿವೆ. ಕೋವಿಡ್ ನಿಯಮ ಉಲ್ಲಂಘಿಸಿದವರನ್ನು ಸಾರ್ವಜನಿಕವಾಗಿ ಅಪಮಾನಿಸುವ ಶೇಮಿಂಗ್ ಪದ್ಧತಿ ಜಾರಿಗೆ ತಂದಿದ್ದಾರೆ.
ಷಿಯಾನ್ ನಗರದಲ್ಲಿ ಸೋಂಕಿತರನ್ನು ರಾತ್ರೋರಾತ್ರಿ ಕ್ವಾರಂಟೈನ್ ಕೇಂದ್ರಗಳಿಗೆ ಶಿಫ್ಟ್ ಮಾಡುವ ಕೆಲಸವೂ ನಡೆದಿದೆ. 1.30 ಕೋಟಿ ಮಂದಿಯನ್ನು ಮನೆಗಳಲ್ಲೇ ನಿರ್ಬಂಧಿಸಿರುವ ಸರ್ಕಾರ, ಯಾರನ್ನು ಹೊರಗೆ ಕಾಲಿಡದಂತೆ ನೋಡಿಕೊಳ್ತಿದೆ.
ಸ್ಥಳೀಯ ಆಡಳಿತವೇ ಮನೆ ಮನೆಗೂ ಉಚಿತವಾಗಿ ಆಹಾರ ಪೂರೈಸುತ್ತಿದೆ. ಹೆನಾನ್ ಪ್ರಾಂತ್ಯದ ಯಜೌ ಎಂಬಲ್ಲಿ ಕೇವಲ ಮೂರೇ ಕೇಸ್ ಬಂದಿದ್ದಕ್ಕೆ ಆ ನಗರವನ್ನು ಲಾಕ್ಡೌನ್ ಮಾಡಲಾಗಿದೆ.