ನವದೆಹಲಿ: ಒಂದೆಡೆ ಭಾರತದ ವಿರುದ್ಧ ಗಡಿ ತಂಟೆ ಮಾಡಲು ನೇಪಾಳವನ್ನು ಛೂ ಬಿಟ್ಟ ಚೀನಾ ಇನ್ನೊಂದೆಡೆ ಆ ದೇಶದ ಭೂಮಿಯನ್ನೇ ಕಬಳಿಸುವ ಮೂಲಕ ಟೋಪಿ ಹಾಕಿದೆ.
ಬಿಹಾರದಲ್ಲಿ ಬೇಕೆಂದೇ ಗಡಿ ತಕರಾರು ತೆಗೆದಿರುವ ನೇಪಾಳ ಸ್ಥಳೀಯರಿಗೆ ಕಿರುಕುಳ ನೀಡುತ್ತಿದೆ. ಇದಕ್ಕೆಲ್ಲಾ ಚೀನಾ ಕುಮ್ಮಕ್ಕು ಕಾರಣ ಎನ್ನಲಾಗಿದೆ. ಆದರೆ ಇನ್ನೊಂದೆಡೆ ಚೀನಾ ಅದೇ ನೇಪಾಳದ ಡ್ರ್ಯಾಗನ್ 10 ಹಳ್ಳಿಗಳನ್ನು ರಸ್ತೆ ನಿರ್ಮಾಣ ಹೆಸರಿನಲ್ಲಿ ಕಬಳಿಸಿವೆ.
ಇದನ್ನು ನೋಡಿಯೂ ನೇಪಾಳ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಚೀನಾ ಅಕ್ರಮವಾಗಿ ಕಬಳಿಸಿದ್ದಲ್ಲದೆ, ತನ್ನ ಭೂ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ನೇಪಾಳದ ಕಡೆಗೆ ನದಿ ತಿರುಗಿಸಿ ಅಲ್ಲಿ ಮಳೆ ಬಂದಾಗ ಪ್ರವಾಹ ಉಂಟಾಗುವ ಪರಿಸ್ಥಿತಿ ತಂದೊಡ್ಡಿದೆ. ಮಿತ್ರ ಎನ್ನುತ್ತಲೇ ಚೀನಾ ಬೆನ್ನ ಹಿಂದೆ ಚೂರಿ ಹಾಕಿದರೂ ನೇಪಾಳ ಬಾಯಿ ಮುಚ್ಚಿಕೊಂಡಿದೆ.