ಚೀನಾ : ಕೊರೊನಾ ಭೀತಿ ಹಿನ್ನಲೆಯಲ್ಲಿ ಚೀನಾ ಮಹಾಗೋಡೆ ಏರುವವರಿಗೆ ಶಿಕ್ಷೆ ವಿಧಿಸುವುದಾಗಿ ಬೀಜಿಂಗ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರಜಾದಿನಗಳಲ್ಲಿ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಚೀನಾದ ಮಹಾಗೋಡೆ ಏರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ಇದಕ್ಕೆ ನಿಷೇಧ ಹೇರಲಾಗಿದೆ. ಆದರೆ ಕೆಲ ಸಂಸ್ಥೆಗಳು ರಜಾದಿನಗಳಲ್ಲಿ ಮಹಾಗೋಡೆ ಏರಲು ಮುಂಗಡ ಬುಕಿಂಗ್ ಮಾಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಇದರ ಭಧ್ರತೆ ಹೆಚ್ಚಿಸಿದ್ದು, ಗಾರ್ಡ್ ಗಳಿಗೆ ರಜಾ ದಿನಗಳಲ್ಲಿಯೂ ಕರ್ತವ್ಯದಲ್ಲಿರುವಂತೆ ಸೂಚಿಸಲಾಗಿದೆ. ಹಾಗೇ ಚೀನಾ ಮಹಾಗೋಡೆ ಹತ್ತಿದರೆ 200ರಿಂದ 30ಸಾವಿರ ಯುವಾನ್ ದಂಡ ವಿಧಿಸುವುದಾಗಿ ತಿಳಿಸಿದೆ.