ಚೀನಾ : ಕೊರೊನಾ ವೈರಸ್ ನ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುವುದು ಉತ್ತಮ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಇದರ ಜೊತೆಗೆ ಈ ಒಂದು ವಸ್ತುವನ್ನು ಧರಿಸುವವರಿಗೂ ಕೊರೊನಾ ಸೋಂಕು ತಗಲುವುದಿಲ್ಲ ಎಂಬುದಾಗಿ ತಿಳಿದುಬಂದಿದೆ.
ಹೌದು. ವಿಶ್ವದಾದ್ಯಂತ ಆತಂಕ ಹುಟ್ಟುಹಾಕಿದ್ದ ಕೊರೊನಾ ವೈರಸ್ ನಾಶಕ್ಕೆ ಹಲವು ದೇಶಗಳು ಹಲವು ಬಗೆಯ ಔಷಧಗಳನ್ನು ಕಂಡುಹಿಡಿಯುತ್ತಿದೆ. ಅದರ ಜೊತೆಗೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದಿದೆ.
ಆದರೆ ಇದೀಗ ಚೀನಾದಲ್ಲಿ ಕೊರೊನಾ ಬಗ್ಗೆ ಹೊಸ ಸಂಶೋಧನೆಯೊಂದನ್ನು ಮಾಡಿದ್ದು, ಅವರ ಪ್ರಕಾರ ಕನ್ನಡಕ ಧರಿಸುವವರಿಗೂ ಸೋಂಕು ಹರಡುವ ಸಾಧ್ಯತೆ ಕಡಿಮೆಯಂತೆ. ಕನ್ನಡಕ ಧರಿಸುವವರು ಪದೇ ಪದೇ ತಮ್ಮ ಕಣ್ಣುಗಳನ್ನು , ಮೂಗು, ಬಾಯಿ ಮುಟ್ಟಿಕೊಳ್ಳುವುದಿಲ್ಲ. ಇದರಿಂದ ಕೊರೊನಾ ತಗಲುವ ಸಾಧ್ಯತೆ ಕಡಿಮೆ ಎಂದು ಚೀನಾ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆಯಂತೆ.