ವಿದ್ಯಾಭ್ಯಾಸಕ್ಕೆಂದು ತಂದೆತಾಯಿಯನ್ನು ಬಿಟ್ಟು ದೂರದಲ್ಲಿ ಒಂಟಿಯಾಗಿದ್ದ ಬಾಲಕನ ಬಳಿ ಆಗಾಗ ಬರುತ್ತಿದ್ದ ಮಹಿಳೆ ಆತನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳಂತೆ. ಅಲ್ಲದೇ ಮನೆಬಿಟ್ಟು ತನ್ನ ಬಳಿ ಬರುವಂತೆ ಒತ್ತಾಯಮಾಡುತ್ತಿದ್ದಳಂತೆ . ಇದರಿಂದ ಆತನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದ್ದ ಕಾರಣ ಬೇಸತ್ತ ಬಾಲಕ ಈ ವಿಚಾರವನ್ನು ತನ್ನ ತಂದೆಗೆ ತಿಳಿಸಿದ್ದಾನೆ.
ಈ ಬಗ್ಗೆ ತಂದೆ ಮಹಿಳೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರುಮಾಡಿದ್ದಾರೆ ಎನ್ನಲಾಗಿದೆ.