ರಿಕ್ಟರ್ ಪ್ರಮಾಣದಲ್ಲಿ 7.1 ರಷ್ಟು ತೀವ್ರತೆಯನ್ನು ಹೊಂದಿರುವ ಭೂಕಂಪ ಸಂಭವಿಸಿದ್ದು 248 ಜನರು ಸಾವನ್ನಪ್ಪಿದ್ದಾರೆ. 21 ಮಕ್ಕಳ ಮೇಲೆ ಛಾವಣಿ ಕುಸಿದು ಸಮಾದಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
1985ರಲ್ಲಿ ಸಂಭವಿಸಿದ ಭೀಕರ ಭೂಕಂಪದ ನೆನಪು ಮಾಸುವ ಮುನ್ನವೇ ಮತ್ತೊಂದು ಭೀಕರ ಭೂಕಂಪ ಎದುರಾಗಿದ್ದರಿಂದ ದೇಶದ ಜನತೆ ತತ್ತರಿಸುವಂತಾಗಿದೆ.
ಸಂತ್ರಸ್ಥರ ರಕ್ಷಣೆಗಾಗಿ ಧಾವಿಸಿರುವ ಸೈನಿಕರು, ಪೊಲೀಸರು, ಎನ್‌ಜಿಓಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದು ಒಂದೇ ಸ್ಥಳದಲ್ಲಿ 21 ಮಕ್ಕಳ ಶವಗಳು ಪತ್ತೆಯಾಗಿವೆ ಎಂದು ಪರಿಹಾರ ಕಾರ್ಯದ ಹೊಣೆ ಹೊತ್ತಿರುವ ಮೇಜರ್ ಜೊಸೆ ಲೂಯಿಸ್ ವೆರ್ಗರಾ ತಿಳಿಸಿದ್ದಾರೆ.
11 ಮಕ್ಕಳನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ. ಎಂದು ಅವರು ಹೇಳಿದರು. ಕುಸಿದ ಕಟ್ಟಡದೊಳಗೆ ಕೆಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜೀವಂತವಾಗಿದ್ದು ಅವರನ್ನು ತುರ್ತು ಕೆಲಸಗಾರರು ರಕ್ಷಿಸುತ್ತಿದ್ದಾರೆ ಎಂದು ಮೇಜರ್ ಜೊಸೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.