ನವದೆಹಲಿ:ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆಗಳಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ.
ಇಂದು ನಸುಕಿನ ಜಾವ 4.25ರ ಸುಮಾರಿಗೆ ಸಂಭವಿಸಿದೆ. ಹರ್ಯಾಣದ ಗೊಹನಾದಲ್ಲಿ ಪಂಕನದ ಕೇಂದ್ರ ಬಿಂದು ಪತ್ತೆಯಾಗಿದೆ. ನೋಯ್ಡಾ, ಶಾಮ್ಲಿ, ಗುರುಗ್ರಾಮ, ದೆಹಲಿ ಸೇರಿದಂತೆ ಹಲವೆಡೆ ಭೂಮಿ ಕಂಪಿಸಿದೆ.
ಹವಾಮಾನ ಇಲಾಖೆ ಪ್ರಕಾರ ಭೂಕಂಪದ ತೀವ್ರತೆ 22 ಕಿಲೋ ಸುತ್ತಮುತ್ತ ವ್ಯಾಪಿಸಿತ್ತು ಎಂದು ತಿಳಿದುಬಂದಿದೆ.