ಬೆಳಗಾವಿ : ಬೆಳಗಾವಿ, ಧಾರವಾಡ ಮತ್ತು ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ತಡರಾತ್ರಿ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬೆಳಗಾವಿಯ ಹಲವು ಭಾಗಗಳಲ್ಲಿ ತಡಾರಾತ್ರಿ 11.45 ರ ವೇಳೆಗೆ , ಧಾರವಾಡದ ಕೆಲ ಪ್ರದೇಶಗಳಲ್ಲಿ 12 ಗಂಟೆಯ ಸುಮಾರಿಗೆ ಕಂಪನದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.
ಹಲವೆಡೆ ಗೋಡೆಗಳು ಬಿರುಕು ಬಿಟ್ಟಿದ್ದು, ಅಡುಗೆ ಮನೆಯಲ್ಲಿಟ್ಟಿದ್ದ ಪಾತ್ರೆಗಳು ಬಿದ್ದಿವೆ. ಇನ್ನು ಭೂಕಂಪನದ ಕೇಂದ್ರ ಬಿಂದು ಮಹಾರಾಷ್ಟ್ರದ ಕೋಯ್ನಾದಲ್ಲಿ ದಾಖಲಾಗಿದೆ. ಭೂಕಂಪನದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.