Webdunia - Bharat's app for daily news and videos

Install App

ಮೆಕ್ ಡೊನಾಲ್ಡ್ ಸಲಾಡ್ ತಿಂದು 163 ಮಂದಿ ಅಸ್ವಸ್ಥ

Webdunia
ಭಾನುವಾರ, 22 ಜುಲೈ 2018 (07:31 IST)
ವಾಷಿಂಗ್ ಟನ್ : ಅಮೆರಿಕಾದ 10 ರಾಜ್ಯಗಳಲ್ಲಿರುವ ವಿಶ್ವ ಪ್ರಸಿದ್ಧ ಮೆಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಲ್ಲಿ ಸಲಾಡ್ ತಿಂದ ಸುಮಾರು 163 ಮಂದಿ ಅಸ್ವಸ್ಥರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಸಲಾಡ್‌ ತಿಂದ ಅನೇಕರಿಗೆ ಡಯೋರಿಯಾ, ಹಸಿವು ನಷ್ಟ, ತೂಕ ನಷ್ಟ, ವಾಂತಿ, ಬಸವಳಿಕೆ, ತಲೆನೋವು, ಮೈ ಕೈ ನೋವು ಉಂಟಾಗಿದೆ. ಅಮೆರಿಕದ ಆರೋಗ್ಯ ಅಧಿಕಾರಿಗಳು ಮೆಕ್‌ ಡೊನಾಲ್ಡ್‌ ನ ಸಲಾಡ್‌ ತಿಂದವರಲ್ಲಿ ಕಂಡು ಬಂದಿರುವ ಸೈಕ್ಲೋಸ್ಪೋರಿಯಾಸಿಸ್‌ ಎಂಬ ಕಾಯಿಲೆಗೆ ಕಾರಣವಾಗಿರುವ ಯಾವ ವಸ್ತು ಸಲಾಡ್‌ನ‌ಲ್ಲಿದೆ ಎಂಬುದರ ವೈಜ್ಞಾನನಿಕ ಪರೀಕ್ಷೆ ನಡೆಸುತ್ತಿದೆ. ಈ ಘಟನೆಯ ಬಗ್ಗೆ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆಂಟೇಶನ್(ಸಿಡಿಸಿ) ತನಿಖೆ ಆರಂಭಿಸಿದೆ.


ಇಲ್ಲಿನಾಯ್ಸ, ಐಯೋವಾ, ಇಂಇಯಾನಾ, ವಿಸ್ಕಾನ್‌ಸಿನ್‌, ಮಿಶಿಗನ್‌, ಒಹಾಯೋ, ಮಿನೆಸೋಟಾ, ನೆಬ್ರಾಸ್ಕಾ, ದಕ್ಷಿಣ ಡಕೋಟ, ಮೋಂಟಾನಾ, ಉತ್ತರ ಡಕೋಟ, ಕೆಂಟುಕಿ, ಪಶ್ಚಿಮ ವರ್ಜಿನಿಯಾ ಮತ್ತು ಮಿಸೋರಿಯಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಈಗಿನ್ನು ಹೊಸ ಬಗೆಯ ಸಲಾಡ್‌ ಪೂರೈಕೆಗೆ ಸಾಧ್ಯವಾಗುವ ವರೆಗೆ ತಾನು ಈಗಿನ ಸಲಾಡ್‌ ಪೂರೈಸುವುದನ್ನು ನಿಲ್ಲಿಸಿರುವುದಾಗಿ ಮೆಕ್‌ ಡೊನಾಲ್ಡ್‌ ಹೇಳಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments