ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಹೊಸ ಸಂಚಲನ ಮೂಡಿಸಿದ ನಟಿ ಶ್ರೀ ರೆಡ್ಡಿ ಅವರು ಅಮೆರಿಕಾ ಸೆಕ್ಸ್ ರಾಕೆಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ನ್ಯೂಸ್ ವೊಂದನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಮೇರಿಕಾದ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರು ಭಾಗಿಯಾಗಿದ್ದಾರೆ ಎಂಬ ಅನುಮಾನವನ್ನು ಚಿಕಾಗೋ ಪೊಲೀಸರು ವ್ಯಕ್ತಪಡಿಸಿದ್ದ ಹಿನ್ನಲೆಯಲ್ಲಿ ಇದೀಗ ನಟಿ ಶ್ರೀ ರೆಡ್ಡಿ ಅವರು,’ ಯು ಎಸ್ ಬರೋ ನಟಿ ನಟಿಯರ ಫೋಟೋವನ್ನು ಆರೋಪಿ ಕಿಶನ್ ಮುದುಗುಮುಡಿ ಅವರ ವಾಟ್ಸಾಪ್ ಪ್ರೊಫೈಲ್ ಪೊಟೋ ಆಗಿ ಹಾಕಿಕೊಳ್ತಾರೆ. ತ್ರಿಷಾ, ಕಾಜಲ್ . ಅಗರವಾಲ್. ರಕುಲ್ ಪ್ರೀತ್ ಸಿಂಗ್. ಪ್ರಣೀತಾ ಸುಭಾಷ್ ಅವರ ಫೋಟೋಗಳನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿ ‘ನನಗೆ ಗೊತ್ತಿಲ್ಲ ನಿಮ್ಮ ಫೋಟೋಗಳನ್ನು ಅವರು ಯಾಕೆ ಅವರ ವಾಟ್ಸಾಪ್ ಡಿಪಿಯಲ್ಲಿ ಹಾಕಿಕೊಂಡಿದ್ದರು’ ಎಂದು ಶ್ರೀ ರೆಡ್ಡಿ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ