Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಗುರುಗಳು ಬಿಳಿಯಾಗಿ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ

ಉಗುರುಗಳು ಬಿಳಿಯಾಗಿ ಆಕರ್ಷಕವಾಗಿ ಕಾಣಲು ಹೀಗೆ ಮಾಡಿ
ಬೆಂಗಳೂರು , ಸೋಮವಾರ, 15 ಜುಲೈ 2019 (09:44 IST)
ಬೆಂಗಳೂರು : ಕೈಗಳ  ಅಂದವನ್ನು ಹೆಚ್ಚಿಸಲು ಉಗುರುಗಳನ್ನು ಬೆಳೆಸುತ್ತಾರೆ. ಆದರೆ ಈ ಉಗುರುಗಳು ಹಳದಿಯಾದರೆ ನೋಡಲು ಅಸಹ್ಯವಾಗಿ ಕಾಣಿಸುತ್ತದೆ. ಈ ಉಗುರುಗಳನ್ನು ಬಿಳಿಯಾಗಿಸಲು ಬ್ಯೂಟಿ ಪಾರ್ಲರಿಗೆ ಹೋಗಿ ಹಣ ಖರ್ಚು ಮಾಡುವ ಬದಲು ಮನೆಯಲ್ಲಿಯೇ ಇದನ್ನು ಬಿಳೆಯಾಗಿಸಿ.




*6 ಚಮಚ ಅಡುಗೆ ಸೋಡಾಕ್ಕೆ 1 ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ, ನಂತರ ಆ ಪೇಸ್ಟ್‌ ಅನ್ನು ಉಗುರಿನ ಮೇಲೆಗೆ ಬ್ರೆಷ್‌ನಿಂದ ಹಚ್ಚಿ ಚೆನ್ನಾಗಿ ತಿಕ್ಕಿ ನಂತರ ತೊಳೆಯಿರಿ. ನಿಮ್ಮ ಉಗುರು ಬೆಳ್ಳಗಾಗಿ ತುಂಬಾ ಆಕರ್ಷಕವಾಗಿ ಕಾಣುತ್ತಿರುತ್ತದೆ.
*2 ½ ಚಮಚ ಅಡುಗೆ ಸೋಡಾಕ್ಕೆ 1 ಚಮಚ ಹೈಡ್ರೋಜನ್‌ ಪರಾಕ್ಸೈಡ್‌ ಮಿಕ್ಸ್ ಮಾಡಿ ಅದನ್ನು ಉಗುರಿಗೆ ಹಚ್ಚಿ ನಂತರ ಬ್ರೆಷ್‌ನಿಂದ ತಿಕ್ಕಿದರೆ ಆಕರ್ಷಕ ಉಗುರು ನಿಮ್ಮದಾಗುವುದು.


* ವಿನೆಗರ್‌ ಅನ್ನು ಒಂದು ಬೌಲ್‌ಗೆ ಹಾಕಿ ಅದರಲ್ಲಿ ಉಗುರುಗಳನ್ನು 3-4 ನಿಮಿಷ ಇಡಿ. ನಂತರ ತೊಳೆಯಿರಿ. ಇದರಿಂದ ಹಳದಿ ಬಣ್ಣ ಹೋಗಿ ಬಿಳಿಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಗುವಾದ ಬಳಿಕ ಮಿಲನದಲ್ಲಿ ಮೊದಲಿನಷ್ಟು ತೃಪ್ತಿ ಸಿಗುತ್ತಿಲ್ಲ