ಬೆಂಗಳೂರು : ಮನುಷ್ಯರಿಗೆ ವಯಸ್ಸಾದ ಮೇಲೆ ಮೂಳೆಗಳು ದರ್ಬಲವಾಗುವುದು ಸಹಜ. ಆದರೆ ಕೆಲವರಿಗೆ ಮಧ್ಯ ವಯಸ್ಸಿನಲ್ಲಿಯೇ ಮೂಳೆಗಳ ಸಮಸ್ಯೆ ಶುರುವಾಗುತ್ತದೆ. ಇದಕ್ಕೆ ನಮ್ಮ ದೈನಂದಿನ ಆಹಾರ ಕೂಡ ಮುಖ್ಯ ಕಾರಣ. ಅಂತಹ ಆಹಾರಗಳು ಯಾವುದೆಂಬುದು ಇಲ್ಲಿದೆ ನೋಡಿ.
* ಕಾಫಿಯಲ್ಲಿ ಕೆಫಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಧಿಕ ಕಾಫಿ ಸೇವನೆಯಿಂದ ಮೂಳೆಗಳ ಸಾಂದ್ರತೆಯು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ಅಸ್ಟಿಯೊಪೊರೋಸಿಸ್ ಸಮಸ್ಯೆಗೆ ಒಳಗಾಗುತ್ತದೆ.
* ಬರ್ಗರ್, ಪಿಜ್ಜಾ ಮತ್ತು ಪಾಸ್ತದಂತಹ ಜಂಕ್ ಫುಡ್ ಗಳಲ್ಲಿ ಸೋಡಿಯಂ ಅಂಶ ಹೆಚ್ಚಾಗಿರುತ್ತದೆ. ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾದರೆ ಕ್ಯಾಲ್ಸಿಯಂ ಪ್ರಯಾಣವನ್ನು ಕಡಿಮೆಯಾಗುತ್ತದೆ. ಇದರಿಂದ ಎಲುಬುಗಳು ದುರ್ಬಲಗೊಳ್ಳುತ್ತದೆ.
* ಅತಿಯಾದ ಮದ್ಯ ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್-ಡಿ ಕೊರತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸಹ ಮೂಳೆಗಳು ದುರ್ಬಲವಾಗುತ್ತದೆ.
* ವಿಟಮಿನ್-ಎ ಕೊರತೆಯನ್ನು ನೀಗಿಸಲು ಸಪ್ಲಿಮೆಂಟ್ಗಳನ್ನು ಸೇವಿಸುತ್ತಿದ್ದರೆ ಕೂಡ ಮೂಳೆಗಳು ದುರ್ಬಲವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.