ಇದು ಒಂದು ಲೈಂಗಿಕ ಸಮಸ್ಯೆಯಾಗಿದ್ದು, ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಲೈಂಗಿಕ ಕ್ರಿಯೆ ಬಳಿಕ ನಿಮಲ್ಲಿ ದುಖಃ ಅಥವಾ ಕಿರಿಕಿರಿಗೆ ಭಾವನೆ ಮೂಡುವುದು. ಲೈಂಗಿಕ ಕ್ರಿಯೆಯ ಬಳಿಕ ಮತ್ತೊಮ್ಮೆ ಸಂಗಾತಿಯನ್ನು ಸ್ಪರ್ಶಿಸಬೇಕೆಂದು ಅನಿಸುವುದಿಲ್ಲ. ಆಧುನಿಕ ಜೀವನ ಶೈಲಿಯಿಂದ PCD ಸಮಸ್ಯೆ ದಾಂಪತ್ಯ ಜೀವನದಲ್ಲಿ ಸಂಗಾಂತಿಗಳ ನಡುವಿನ ವೈಮನಸ್ಯಕ್ಕೆ ಕಾರಣವಾಗುತ್ತಿದೆಯಂತೆ.
ಕ್ವೀನ್ಸ್ಲ್ಯಾಂಡ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಸಂಸ್ಥೆಇಂತಹದೊಂದು ಸಮಸ್ಯೆಯ ಕುರಿತು ಆಸ್ಟ್ರೇಲಿಯಾ, ಯುಕೆ, ರಷ್ಯಾ, ನ್ಯೂಜಿಲ್ಯಾಂಡ್ ಮತ್ತು ಜರ್ಮನಿ ಸೇರಿದಂತೆ ವಿವಿಧ ದೇಶಗಳ 1208 ಜನರ ಮೇಲೆ ಸಂಶೋಧನೆ ನಡೆಸಿದೆ. ಈ ವೇಳೆ ಶೇ.41ರಷ್ಟು ಮಂದಿ PCD ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಮಸ್ಯೆ ಪುರುಷರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಸಂಶೋಧಕರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.