Publish Date: Sat, 03 Aug 2019 (09:18 IST)
Updated Date: Sat, 03 Aug 2019 (09:19 IST)
ಬೆಂಗಳೂರು: ರೊಮ್ಯಾನ್ಸ್ ಮಾಡಲು ಒಳ್ಳೆಯ ಸಮಯ, ಮೂಡ್ ಇದ್ದರೇ ದಾಂಪತ್ಯ ಜೀವನ ಚೆನ್ನಾಗಿರಲು ಸಾಧ್ಯ. ಅಪ್ಪಿ ತಪ್ಪಿಯೂ ಈ ಸಮಯದಲ್ಲಿ ಮಾತ್ರ ಮಿಲನ ಕ್ರಿಯೆ ನಡೆಸಬಾರದಂತೆ!
ಬ್ರಿಟನ್ ನ ಅಧ್ಯಯನಕಾರರ ಪ್ರಕಾರ ರಾತ್ರಿ 9 ರಿಂದ 1 ಗಂಟೆಯೊಳಗೆ ಹೆಚ್ಚಿನ ದಂಪತಿಗಳು ಮಿಲನ ಕ್ರಿಯೆ ನಡೆಸುತ್ತಾರೆ. ಆದರೆ ಈ ದಂಪತಿಗಳು ಇದರಿಂದ ತೃಪ್ತಿ ಹೊಂದುವುದಿಲ್ಲ. ಹೀಗಾಗಿ ಈ ಸಮಯ ಸಂಭೋಗಿಸಲು ತಕ್ಕ ಸಮಯವಲ್ಲ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ!
ಹಾಗಿದ್ದರೆ ಮಿಲನ ಕ್ರಿಯೆ ನಡೆಸಲು ಸರಿಯಾದ ಸಮಯ ಯಾವುದು? ಅಧ್ಯಯನಕಾರರ ಪ್ರಕಾರ ಬೆಳಗಿನ ಜಾವದಲ್ಲಿ ಮಾಡುವುದು ಉತ್ತಮವಂತೆ. ಇದರಿಂದ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಂತೋಷ, ತೃಪ್ತಿ ಸಿಗುತ್ತದೆ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.
Krishnaveni K
Publish Date: Sat, 03 Aug 2019 (09:18 IST)
Updated Date: Sat, 03 Aug 2019 (09:19 IST)