Publish Date: Fri, 02 Aug 2019 (09:01 IST)
Updated Date: Fri, 02 Aug 2019 (09:02 IST)
ಬೆಂಗಳೂರು: ಮಿಲನ ಕ್ರಿಯೆ ಎನ್ನುವುದೂ ಒಂದು ರೀತಿಯಲ್ಲಿ ದೈಹಿಕ ವ್ಯಾಯಾಮದಂತೆ. ಕೆಲವರಿಗೆ ಮಿಲನ ಕ್ರಿಯೆ ನಂತರ ವಿಪರೀತ ಸುಸ್ತಾಗುತ್ತದೆ. ಇದಕ್ಕೆ ಕಾರಣವೇನು ಎಂಬ ಆತಂಕ ಹಲವರಿಗೆ ಕಾಡುತ್ತದೆ.
ಕೆಲವೊಮ್ಮೆ ನಿಶ್ಯಕ್ತಿ, ರಕ್ತಹೀನತೆ ಸಮಸ್ಯೆಯಿದ್ದಾಗ ಅಥವಾ ಬಿಪಿ, ಶುಗರ್ ಇತ್ಯಾದಿ ಸಮಸ್ಯೆಯಿದ್ದವರಿಗೆ ಲೈಂಗಿಕ ಕ್ರಿಯೆ ಬಳಿಕ ವಿಪರೀತ ಸುಸ್ತಾಗುವ ಸಾಧ್ಯತೆಯಿರುತ್ತದೆ.
ಇದು ಯಾವುದೇ ಸಮಸ್ಯೆಯಿಲ್ಲದೇ ಇದ್ದಾಗಲೂ ಸುಸ್ತಾಗುತ್ತಿದ್ದರೆ ಮಿಲನದ ನಂತರ ನೀವು ಸರಿಯಾಗಿ ವಿಶ್ರಾಂತಿ ಪಡೆಯಬೇಕು ಎಂದು ಅರ್ಥ. ಇಲ್ಲವಾದರೆ ಮಿಲನ ಕ್ರಿಯೆ ನಡೆಸುವ ಸಮಯ ಬದಲಾಯಿಸಿ ಆದಷ್ಟು ವಿಶ್ರಾಂತಿ, ನಿದ್ರೆ ಸಿಗುವಂತೆ ಮಾಡಿಕೊಂಡರೆ ಸಾಕು. ಅದರ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ.