Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಮನೆಯಲ್ಲಿಯೇ ಮಾಡಬಹುದಾದ ಅದ್ಭುತ ಟಾನಿಕ್‌

ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಮನೆಯಲ್ಲಿಯೇ ಮಾಡಬಹುದಾದ ಅದ್ಭುತ ಟಾನಿಕ್‌

ಅತಿಥಾ

ಬೆಂಗಳೂರು , ಶುಕ್ರವಾರ, 2 ಫೆಬ್ರವರಿ 2018 (16:02 IST)
ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತಹೀನತೆಯು ಪ್ರಪಂಚದಲ್ಲೇ ಅತ್ಯಂತ ಪೌಷ್ಟಿಕಾಂಶದ ಕೊರತೆಯ ರೋಗವಾಗಿದೆ. ರಕ್ತಹೀನತೆಯ ಕೆಲವು ಲಕ್ಷಣಗಳೆಂದರೆ ದಣಿದ ಅಥವಾ ಹಗುರವಾದ ತಲೆ, ಬಾಡಿದ ಚರ್ಮ, ಮತ್ತು ಉಸಿರಾಟದಲ್ಲಿ ತೊಂದರೆ ಇತ್ಯಾದಿ. ರಕ್ತಹೀನತೆಯು ಸಾಮಾನ್ಯವಾಗಿ 
ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ. ಕೆಂಪು ರಕ್ತ ಕಣಗಳು ರಕ್ತಹೀನತೆಗೆ ಮುಖ್ಯ ಪಾತ್ರವನ್ನು ಹೊಂದಿವೆ ಮತ್ತು ಕೆಂಪು ರಕ್ತ ಕಣಗಳ 
 
ಸಂಖ್ಯೆಯನ್ನು ಹೆಚ್ಚಿಸುವುದರಿಂದ ಈ ಸ್ಥಿತಿಯನ್ನು ಗುಣಪಡಿಸಲು ಸಹಾಯವಾಗುತ್ತದೆ.
 
ಸರಳ, ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿ ನಿಮ್ಮ ರಕ್ತದ ಕಣಗಳನ್ನು ನೀವು ವಿವಿಧ ರೀತಿಯಲ್ಲಿ ಸುಧಾರಿಸಬಹುದು. ಕಬ್ಬಿಣದ ಸಮೃದ್ಧ ಆಹಾರವನ್ನು 
 
ಸೇವಿಸುವುದರಿಂದ ನಿಮ್ಮ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಬಹುದು. 
 
ಬೇಕಾಗುವ ಸಾಮಗ್ರಿಗಳು
1 ಕೆಜಿ ಬೀಟ್ರೂಟ್
½ ಕೆಜಿ ಕ್ಯಾರೆಟ್
2 ಸೇಬುಗಳು
2 ರಿಂದ 3 ಕಿತ್ತಳೆ ಹಣ್ಣು
ಒಂದು ನಿಂಬೆಯ ರಸ
500 ಗ್ರಾಂ ಜೇನುತುಪ್ಪ
 
ಮಾಡುವ ವಿಧಾನ
- ಬೀಟ್ರೂಟ್, ಸೇಬುಗಳು ಮತ್ತು ಕ್ಯಾರೆಟ್‌ಗಳನ್ನು ತುಂಡುಗಳಾಗಿ ಕತ್ತರಿಸು.
- ಎಲ್ಲಾ ಕತ್ತರಿಸಿದ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.
- ನಿಂಬೆ ರಸ, ಕಿತ್ತಳೆ ರಸ ಮತ್ತು ಜೇನುತುಪ್ಪವನ್ನು ಬೀಟ್ರೂಟ್ ಮಿಶ್ರಣಕ್ಕೆ ಸೇರಿಸಿ.
- ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 
- ಒಮ್ಮೆ ತಯಾರಿಸಿದ ನಂತರ, ಮಿಶ್ರಣವನ್ನು ಗಾಜಿನ ಬಾಟಲ್‌ಗೆ ವರ್ಗಾಯಿಸಿ ಮತ್ತು ರೆಫ್ರಿಜರೇಟರ್‌ನಲ್ಲಿ ಇರಿಸಿ.
- ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನ ಬೆಳಿಗ್ಗೆ ಈ ಟಾನಿಕ್‌ನ 100 ಮಿಲೀ ಕುಡಿಯಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾದಿಷ್ಠ ಸಬ್ಬಕ್ಕಿ ಪಡ್ಡು