Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಖದ ಮೇಲಿನ ಬಿಳಿ ಕಲೆ ಹೋಗಬೇಕಾ...? ಹಾಗಾದರೆ ಹೀಗೆ ಮಾಡಿ

ಮುಖದ ಮೇಲಿನ ಬಿಳಿ ಕಲೆ ಹೋಗಬೇಕಾ...? ಹಾಗಾದರೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 1 ಜನವರಿ 2018 (10:23 IST)
ಬೆಂಗಳೂರು : ಮುಖದ ಮೇಲಿರುವ ಕೆಲವು ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಕೆಲವು ಕಲೆಗಳು ಅಪಾಯದ ಸೂಚನೆಯಾದರೆ, ಕೆಲವು ದೇಹದಲ್ಲಿರುವ ಪೋಷ್ಠಿಕಾಂಶ ಹಾಗು ಹಾರ್ಮೊನುಗಳ ಏರುಪೇರಿನಿಂದ ಉಂಟಾಗುತ್ತದೆ. ಇದರಿಂದಾಗಿ ಮುಖದ ಹಾಗು ದೇಹದ ಇತರ ಭಾಗಗಳಲ್ಲಿ ಬಿಳಿ ಕಲೆಗಳು ಕಾಣಿಸುತ್ತದೆ. ಇವುಗಳನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳಿವೆ.

 
ಕೊಬ್ಬರಿ ಎಣ್ಣೆಯನ್ನು ಬಿಳಿ ಕಲೆಗಳ ಮೇಲೆ ಹಚ್ಚಿ ಮಸಾಜ್ ಮಾಡಿದರೆ  2 ವಾರಗಳಲ್ಲಿ ಅದು ಹೋಗುತ್ತದೆ. ಶುಂಠಿ ಪೇಸ್ಟನ್ನು ಕಲೆಗಳ ಮೇಲೆ ಹಚ್ಚಿ ಒಣಗಿದ ಮೇಲೆ ತೊಳೆದರೆ ಕಲೆಗಳು ಕಡಿಮೆಯಾಗುತ್ತದೆ. 1 ಚಮಚ ಅರಶಿನ ಪುಡಿಗೆ 2 ಚಮಚ ಸಾಸಿವೆ ಎಣ್ಣೆ ಸೇರಿಸಿ ಪೇಸ್ಟ್ ಮಾಡಿ ಕಲೆ ಭಾಗಕ್ಕೆ ಹಚ್ಚಿದರೆ ಕಲೆ ಹೋಗುತ್ತದೆ. ಇದನ್ನು ದಿನಕ್ಕೆ 2 ಬಾರಿ ಮಾಡಬೇಕು.



ಕಹಿಬೇವಿನ ಎಲೆ ಹಾಗು ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿ ಮಾಡಿ ಪ್ರತಿದಿನ 1 ಗ್ಲಾಸ್ ನೀರಿಗೆ 1 ಚಮಚ ಪುಡಿ ಮಿಕ್ಸ್ ಮಾಡಿ ಕುಡಿಯಿರಿ. ಇಲ್ಲವಾದಲ್ಲಿ ಕಹಿಬೇವಿನ ಎಲೆ ಯನ್ನು ಅರೆದು ಪೇಸ್ಟ್ ಮಾಡಿ ಕಲೆ ಭಾಗಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ತೊಳೆಯಿರಿ. 1 ಚಮಚ ಗಂಧದ ಪೇಸ್ಟ್, 1 ಚಮಚ ಅರಶಿನ ಪುಡಿ, 1ಚಮಚ ಅಕ್ಕಿಹಿಟ್ಟು ಗಳನ್ನು 2 ಚಮಚ ಜೇನುತುಪ್ಪಕ್ಕೆ ಸೇರಿಸಿ ಕಲೆಗೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ ಬಿಳಿ ಕಲೆಗಳು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆರಿಗೆ ನಂತರ ಯೋನಿಯಲ್ಲಾಗುವ ಬದಲಾವಣೆಗಳೇನು ಗೊತ್ತಾ