ಬೆಂಗಳೂರು: ಮಹಿಳೆಯರಿಗೆ 30 ರ ಹರೆಯಕ್ಕೆ ಕಾಲಿಟ್ಟ ಕೂಡಲೇ ನನಗೆ ವಯಸ್ಸಾಗುತ್ತಿದೆ ಎಂಬ ಏನೋ ಆತಂಕ ಶುರುವಾಗುತ್ತದೆ. ಆಗ ಆಕೆಯ ದೇಹದಲ್ಲಿ ಕೊಂಚ ಬದಲಾವಣೆಯೂ ಆಗುತ್ತದೆ. ಇದು ಅವರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಬಹುದು.
30 ದಾಟಿದ ಮೇಲೆ ನನ್ನ ಪತ್ನಿ ವಿಪರೀತ ಸಿಡುಕುತ್ತಾಳೆ, ಸಣ್ಣ ಪುಟ್ಟ ವಿಚಾರಕ್ಕೆ ಬೇಸರಗೊಳ್ಳುತ್ತಾಳೆ ಎಂದೆಲ್ಲಾ ಕೆಲವು ಗಂಡಸರು ಕಂಪ್ಲೇಂಟ್ ಮಾಡುತ್ತಾರೆ. ಇದಕ್ಕೆ ಗಾಬರಿಯಾಗುವುದು ಅಥವಾ ಅವರ ಮೇಲೆ ಬೇಸರಗೊಳ್ಳುವುದು ಪರಿಹಾರವಲ್ಲ.
30 ರ ಬಳಿಕ ಮಹಿಳೆಯರಲ್ಲಿ ಹಾರ್ಮೋನ್ ನ ಬದಲಾವಣೆಯಾಗುತ್ತದೆ. ಇದರಿಂದಾಗಿ ಆಕೆಗೆ ಮಾನಸಿಕ ಖಿನ್ನತೆ ಅಥವಾ ಯಾರೂ ನನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಭಾವನೆ ಮೂಡುವುದು, ಆತಂಕ ಇತ್ಯಾದಿ ಉಂಟಾಗುವುದು ಸಹಜ. ಅದನ್ನು ಮನೆಯವರು ಅರಿತು ನಡೆಯುವುದು ಮುಖ್ಯ.