Publish Date: Fri, 07 Jun 2019 (09:06 IST)
Updated Date: Fri, 07 Jun 2019 (09:08 IST)
ಬೆಂಗಳೂರು: ಪುರುಷರಲ್ಲಿ ಇಂದು ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ವೀರ್ಯಾಣುಗಳ ಸಂಖ್ಯೆ ಕುಂಠಿತವಾಗುವುದು. ಇದರಿಂದ ಲೈಂಗಿಕ ಅಸಮರ್ಥತೆ ಹೆಚ್ಚುತ್ತದೆ. ಹೀಗಾಗಿ ವೀರ್ಯಾಣುಗಳ ಸಂಖ್ಯೆ ವೃದ್ಧಿಯಾಗಲು ಮಾಡಬೇಕಾಗಿರುವ ಮುಖ್ಯ ಕೆಲಸವೇನು ಗೊತ್ತಾ?
ಒತ್ತಡದ ಆಧುನಿಕ ಜೀವನವೂ ವೀರ್ಯಾಣುಗಳ ಸಂಖ್ಯೆ ಕುಂಠಿತವಾಗಲು ಕಾರಣವಾಗುತ್ತದೆ. ಹೀಗಾಗಿ ಬೆಳಿಗ್ಗಿನ ಹೊತ್ತು ಪ್ರತಿನಿತ್ಯ ಜಾಗಿಂಗ್ ಮಾಡುವುದನ್ನು ಮರೆಯಬೇಡಿ. ತೂಕ ಹೆಚ್ಚಿದಂತೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು.
ಹೀಗಾಗಿ ಪ್ರತಿನಿತ್ಯ ಸ್ವಲ್ಪ ವರ್ಕೌಟ್ ಮತ್ತು ಕೆಲ ಹೊತ್ತು ಯೋಗ ಮಾಡುವ ಆರೋಗ್ಯಕರ ಅಭ್ಯಾಸ ಬೆಳೆಸಿಕೊಂಡರೆ ಲೈಂಗಿಕ ಜೀವನ ಸುಖಕರವಾಗಿರುತ್ತದೆ.