ಬೆಂಗಳೂರು: ಮದುವೆಯಾಗುವಾಗ ಹುಡುಗನ ವಯಸ್ಸಿಗೂ ಹುಡುಗಿ ವಯಸ್ಸಿಗೂ ಎಷ್ಟು ಅಂತರವಿರಬೇಕು? ತನಗಿಂತ ದುಪ್ಪಟ್ಟು ವಯಸ್ಸಿನ ಹುಡುಗನನ್ನು ಮದುವೆಯಾದರೆ ತೊಂದರೆಯೇ? ಎಂಬಿತ್ಯಾದಿ ಅನುಮಾನಗಳು ಕೆಲವರಿಗಿದೆ.
ತನಗಿಂತ 2-3 ವರ್ಷ ಹೆಚ್ಚು ವಯಸ್ಸಿನವರನ್ನು ಮದುವೆಯಾದರೆ ಸಮಾನ ಮನಸ್ಥಿತಿ ಹೊಂದಿರುತ್ತಾರೆ. ಇದರಿಂದ ಹೊಂದಾಣಿಕೆ ಸುಲಭ ಎನ್ನುವುದು ಸಾಮಾನ್ಯ ಪದ್ಧತಿ. ಆದರೆ ಕೆಲವೊಮ್ಮೆ ಹೆಚ್ಚು ವಯಸ್ಸಿನ ಅಂತರವಿದ್ದರೂ ಉತ್ತಮ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವ ಮನೋಭಾವವಿದ್ದರೆ ಮದುವೆಯಾಗಲು ಅಡ್ಡಿಯಲ್ಲ.
ಆದರೆ ಇಂತಹ ಮದುವೆಯಲ್ಲಿ ಕೆಲವೊಮ್ಮೆ ಲೈಂಗಿಕಾಸಕ್ತಿಯಲ್ಲಿ ಬೇರೆ ಬೇರೆ ಅಭಿಪ್ರಾಯವಿರಬಹುದು. ಇಬ್ಬರ ವಯಸ್ಸಿಗೆ ತಕ್ಕ ಹಾಗೆ ಮಿಲನ ಕ್ರಿಯೆ ಬಗ್ಗೆ ಬೇರೆ ರೀತಿಯ ಆಸಕ್ತಿಗಳಿದ್ದರೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಗಬಹುದು. ಹೀಗಾಗಿ ಆದಷ್ಟು ಕಡಿಮೆ ವಯಸ್ಸಿನ ಅಂತರವಿದ್ದರೆ ಉತ್ತಮ.