ಬೆಂಗಳೂರು: ಕೆಲವರಿಗೆ ಲೈಂಗಿಕ ನಿರಾಸಕ್ತಿ ಇದ್ದರೆ, ಇನ್ನು, ಕೆಲವರಿಗೆ ಅತಿಯಾದ ಆಸಕ್ತಿಯಿರುತ್ತದೆ. ಅದೂ ಪ್ರತಿನಿತ್ಯ ಲೈಂಗಿಕ ತೃಷೆ ತೀರಿಸಿಕೊಳ್ಳಬೇಕೆನಿಸುತ್ತದೆ. ಇದನ್ನು ನಿಯಂತ್ರಿಸಬೇಕೇ? ಅಥವಾ ಹಾಗೇ ಬಿಡಬೇಕೇ ಎಂಬ ದ್ವಂದ್ವ ಕಾಡುತ್ತದೆ.
ಲೈಂಗಿಕ ಕ್ರಿಯೆ ಬಗ್ಗೆ ಇಬ್ಬರಿಗೂ ಸಮಾನ ಆಸಕ್ತಿಯಿದ್ದಾಗ ಇದರಿಂದ ತೊಂದರೆಯಿಲ್ಲ. ಹಾಗಿದ್ದರೂ ದೇಹ ಸುಸ್ತಾಗದಂತೆ ನೋಡಿಕೊಳ್ಳುವುದೂ ಮುಖ್ಯ! ಹೀಗಾಗಿ ಪ್ರತಿನಿತ್ಯ ಲೈಂಗಿಕ ಕ್ರಿಯೆ ಮಾಡುವುದನ್ನು ಕೊಂಚ ಮಟ್ಟಿಗೆ ನಿಯಂತ್ರಿಸಬೇಕೆಂದರೆ ಆ ಸಮಯದಲ್ಲಿ ಬೇರೆ ವಿಚಾರಗಳ ಬಗ್ಗೆ ಗಮನಕೊಡಬೇಕು. ಪುಸ್ತಕ ಓದುವುದು, ಯಾವುದಾದರೂ ಆಟ ಆಡುವುದು, ಟಿವಿ ನೋಡುವುದು ಇತ್ಯಾದಿ. ಗಮನ ಬೇರೆ ಕಡೆಗೆ ಸೆಳೆದಾಗ ಲೈಂಗಿಕ ಬಯಕೆ ಕೊಂಚ ನಿಯಂತ್ರಣಕ್ಕೆ ಬರಬಹುದು. ಆದರೆ ಇದು ಖಾಯಿಲೆ ಏನೂ ಅಲ್ಲ. ಎಲ್ಲವೂ ನಮ್ಮ ಮನೋನಿಗ್ರಹದ ಮೇಲೆ ನಿರ್ಧಾರವಾಗಿರುತ್ತದೆ.