ಬೆಂಗಳೂರು: ಬ್ರೆಡ್ ರೋಸ್ಟ್ ಮಾಡುವಾಗ ಕೊಂಚ ಹೆಚ್ಚು ಸುಟ್ಟು ಕಪ್ಪಗಾದರೆ ಪರವಾಗಿಲ್ಲ ಎಂದು ಸೇವಿಸಬೇಡಿ. ಈ ರೀತಿ ಹೆಚ್ಚು ಸುಟ್ಟು ಕಪ್ಪಗಾದ ಬ್ರೆಡ್ ಸೇವಿಸುವುದು ತುಂಬಾ ಡೇಂಜರ್ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಬ್ರೆಡ್ ನಲ್ಲಿ ಆಸ್ಪರಾಗಿನ್ ಎಂಬ ಅಮಿನೋ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬ್ರೆಡ್ ನ್ನು ಹೆಚ್ಚಾಗಿ ಸುಟ್ಟಾಗ ಅದರಲ್ಲಿ ಅಮಿನೋ ಆಸಿಡ್ ನಿಂದಾಗಿ ಆಕ್ರಿಲಾಮಿಡ್ ಎಂಬ ಕ್ಯಾನ್ಸರ್ ಕಾರಕ ರಾಸಾಯನಿಕ ಬಿಡುಗಡೆಯಾಗುತ್ತದಂತೆ.
ಇದು ನಮಗೆ ಕ್ಯಾನ್ಸರ್ ಅಪಾಯ ತಂದೊಡ್ಡಬಹುದು. ಅದೇ ಕಾರಣಕ್ಕೆ ಹೆಚ್ಚು ಸುಟ್ಟುಕೊಂಡ ಬ್ರೆಡ್ ಸೇವಿಸದೇ ಇರುವುದು ಒಳಿತು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.