Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುವುದು ಯಾಕೆ ಗೊತ್ತಾ?

ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುವುದು ಯಾಕೆ ಗೊತ್ತಾ?
ಬೆಂಗಳೂರು , ಭಾನುವಾರ, 25 ಫೆಬ್ರವರಿ 2018 (05:48 IST)
ಬೆಂಗಳೂರು : ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಸೆಕ್ಸ್‌ ಲೈಫ್ ಚೆನ್ನಾಗಿರಬೇಕು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಸೆಕ್ಸ್‌ ಲೈಫ್‌ ಬೋರ್‌ ಎನಿಸಿದಷ್ಟು ವೈವಾಹಿಕ ಜೀವನವು ನಿರಾಸಕ್ತಿಯಿಂದ ಕೂಡಿರುತ್ತದೆ. ಈ ರೀತಿ ನಿರಾಸಕ್ತಿ ಕಾಡಲು ಕಾರಣಗಳು ಹಲವಾರು ಇವೆ. ಅವುಗಳಲ್ಲಿ ಪ್ರಮುಖವಾದ ಕಾರಣಗಳು ಯಾವುವೆಂದರೆ


* ನಿಮ್ಮ ಸೆಕ್ಸ್‌ ಲೈಫ್‌ ಎಷ್ಟು ಚೆನ್ನಾಗಿರುತ್ತದೆ, ಅಷ್ಟೇ ಸಂತೋಷ, ಸಂತೃಪ್ತಿ ನಿಮಗೆ ಸಂಗಾತಿಯಿಂದ ಸಿಗುತ್ತದೆ. ಸೆಕ್ಸ್‌ ಮೂಲಕ ನೀವು ನಿಮ್ಮ ಸಂಗಾತಿಗೆ ಪ್ರೋತ್ಸಾಹ ನೀಡಬೇಕು. ಆದರೆ ಈ ಸಂದರ್ಭದಲ್ಲಿ ನೀವು ಚಿತ್ರ ವಿಚಿತ್ರ ಶಬ್ಧಗಳನ್ನು ಹೊರತರುತ್ತಿದ್ದರೆ ಇದರಿಂದ ಸಂಗಾತಿಗೆ ಅಸಹ್ಯ ಉಂಟಾಗುತ್ತದೆ. ಆ ರೀತಿ ಆಗದಂತೆ ನೋಡಿಕೊಳ್ಳಿ.


*ಸಂಬಂಧದ ಆರಂಭದಲ್ಲಿ ಪತಿ ಜೊತೆಗಿನ ಆಂತರಿಕ ಸಂಬಂಧದ ಕುರಿತಂತೆ ಪತ್ನಿಗೆ ಸ್ವಲ್ಪ ನಾಚಿಕೆ ಉಂಟಾಗುತ್ತದೆ. ಈ ನಾಚಿಕೆಯನ್ನು ಬಿಡಿ. ಬದಲಾಗಿ ಪತಿಯ ಜೊತೆಗೆ ಓಪನ್‌ ಆಗಿ ಇರಲು ಪ್ರಯತ್ನಿಸಿ. ನಾಚಿಗೆಯನ್ನು ದೂರ ಮಾಡಿದರೆ ಬೋರಿಂಗ್‌ ಎನಿಸೋದಿಲ್ಲ.


*ಸೆಕ್ಸ್‌ ಲೈಫ್‌ನಲ್ಲಿ ಎಕ್ಸೈಟ್‌ಮೆಂಟ್‌ ತುಂಬಿರಬೇಕು ಎಂದಾದರೆ ಹೊಸ ಹೊಸ ಬದಲಾವಣೆಗಳನ್ನು ತನ್ನಿ. ಎಕ್ಸ್‌ಪೆರಿಮೆಂಟ್‌ ಮಾಡಿ. ಒಬ್ಬರಿಗೊಬ್ಬರ ಆಸೆಗಳನ್ನು ಪೂರೈಸಿ. ಹೀಗೆ ಮಾಡದೆ ಇದ್ದರೆ ಸೆಕ್ಸ್‌ ಲೈಫ್‌ ಬೋರಿಂಗ್‌ ಎನಿಸುತ್ತದೆ.


* ಕೆಲವೊಂದು ಜನ ಸೆಕ್ಸ್‌ ಸಂದರ್ಭ ಮನೆಯ ವಿಷಯ ಅಥವಾ ಆಫೀಸ್‌ ವಿಷಯ ಮಾತನಾಡಲು ಆರಂಭಿಸುತ್ತಾರೆ. ಹೀಗೆ ಮುಂದುವರೆದರೆ ಸೆಕ್ಸ್‌ ಬಗ್ಗೆ ಇಂಟರೆಸ್ಟ್‌ ಕಡಿಮೆಯಾಗುತ್ತದೆ.


*ಹೆಚ್ಚಾಗಿ ಒಂದೇ ಕಡೆ ಲೈಂಗಿಕ ಕ್ರಿಯೆ ನಡೆಸೋದರಿಂದ ಬೋರಿಂಗ್‌ ಎನಿಸುತ್ತದೆ. ನಿಮ್ಮ ರೊಮ್ಯಾಂಟಿಕ್‌ ಲೈಫ್‌ನ್ನು ಇನ್ನಷ್ಟು ರೋಮಾಂಚನಗೊಳಿಸಲು ನೀವು ಜಾಗವನ್ನು ಬದಲಾಯಿಸಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನುಗ್ಗೆಸೊಪ್ಪಿನ ಮೊಸರು ಬಜ್ಜಿ ಮಾಡುವುದು ಹೇಗೆ ಗೊತ್ತಾ...?