ಬೆಂಗಳೂರು: ಮಹಿಳೆಯರಿಗೆ ಗರ್ಭಿಣಿಯಾದ ಮೇಲೆ ಎಲ್ಲಿ ತನ್ನ ವೃತ್ತಿ ಜೀವನಕ್ಕೆ ತೊಂದರೆಯಾಗುತ್ತದೋ ಎಂಬ ಆತಂಕವಿರುತ್ತದೆ. ಹಾಗಿದ್ದರೆ ಎರಡನ್ನೂ ಸಮತೋಲನದಲ್ಲಿರಿಸುವಂತೆ ಯಾವ ವಯಸ್ಸಲ್ಲಿ ಮಕ್ಕಳ ಮಾಡಿಕೊಳ್ಳಬೇಕು?
ಒಂದು ಅಧ್ಯಯನ ಪ್ರಕಾರ 30 ವರ್ಷ ದಾಟಿದ ಬಳಿಕ ಗರ್ಭಿಣಿಯಾದ ಮಹಿಳೆಯರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ಪಡೆದು ಹೆಚ್ಚು ಹಣ ಗಳಿಸಿರುತ್ತಾರಂತೆ.
ಆದರೆ 25 ವರ್ಷಕ್ಕಿಂತ ಮೊದಲು ಗರ್ಭಿಣಿಯಾದ ಮಹಿಳೆಯರ ವೃತ್ತಿ ಜೀವನವೂ ತೊಂದರೆಗೆ ಸಿಲುಕಿಕೊಳ‍್ಳುವುದಲ್ಲದೆ, ಅವರ ಗಳಿಕೆ ಪ್ರಮಾಣವೂ ಕಡಿಮೆಯಾಗುತ್ತದಂತೆ. ಅದೇ ರೀತಿ 28 ರಿಂದ 31 ವರ್ಷದೊಳಗೆ ಗರ್ಭವತಿಯಾದ ಮಹಿಳೆಯರಿಗೂ ಇದೇ ಸಮಸ್ಯೆ ಕಾಡಿದೆ. 25 ರಿಂದ 60 ವರ್ಷವರೆಗಿನ ಮಹಿಳೆಯರನ್ನು ಸಂದರ್ಶಿಸಿ ಅಧ್ಯಯನಕಾರರು ಈ ತೀರ್ಮಾನಕ್ಕೆ ಬಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.