ಬೆಂಗಳೂರು : ಶ್ರಾವಣ ಮಾಸದ ಶುಭದಿನದಲ್ಲಿ ಬರುವುದು ವರಮಹಾಲಕ್ಷ್ಮೀ ವೃತ. ಈ ವೃತ ಪೌರ್ಣಮಿಯ ದಿನ ಮೊದಲು ಬರುವ ಶುಕ್ರವಾರದಂದು ಮಾಡುತ್ತಾರೆ. ವೃತದ ನಂತರ ಪೂಜೆಯನ್ನು ಮಾಡಿ ಮನೆಗೆ ಬರುವ ಮುತ್ತೈದೆಯರಿಗೆ ತಾಂಬೂಲವನ್ನು ನೀಡಬೇಕು. ಹೀಗೆ ಕೊಡುವ ತಾಂಬೂಲದಲ್ಲಿ ಈ ವಸ್ತುಗಳು ಇದ್ದಾಗ ಮಾತ್ರ ಆ ಪೂಜಾಫಲಗಳು ನಮಗೆ ದೊರೆಯುತ್ತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ತಾಂಬೂಲದಲ್ಲಿ ಅರಶಿನ ಕುಂಕುಮ, ಹೂವುಹಣ್ಣು, ಎಲೆ ಅಡಿಕೆ ಹಾಗೂ ಇದರ ಜೊತೆಗೆ ನೆನೆಸಿದ ಕಡಲೆಕಾಳನ್ನು ತಪ್ಪದೇ ನೀಡಬೇಕು. ಮಹಿಳೆಯರಿಗೆ ಸಾಮಾನ್ಯವಾಗಿ ಇರುವ ದೋಷವೆಂದರೆ ಅದು ಕುಜ ದೋಷ ಮತ್ತು ಚಂದ್ರದೋಷ. ಈ ದೋಷ ನಿವಾರಣೆಯಾಗಬೇಕಾದರೆ ಎಲೆಅಡಿಕೆ ಮತ್ತು ಕಡಲೆಕಾಳನ್ನು ಕೊಡಬೇಕು. ಹಾಗೇ ನೆನೆಸಿದ ಕಡಲೆಕಾಳನ್ನು ತಾಂಬೂಲದ ಜೊತೆ ಕೊಡುವುದರಿಂದ ಗುರುಗ್ರಹ ಕೂಡ ಬಲವಾಗುತ್ತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ