ಬೆಂಗಳೂರು: ಬೆಳಗಿನ ಹೊತ್ತು ಟೈಮ್ ವೇಸ್ಟ್ ಮಾಡಬೇಡ. ಓದಿದರೆ ಚೆನ್ನಾಗಿ ತಲೆಗೆ ಹತ್ತುತ್ತೆ ಅಂತ ಮನೆಯಲ್ಲಿ ಪೋಷಕರು ಹೇಳುತ್ತಿದ್ದರೆ ಉದಾಸೀನ ಮಾಡಬೇಡಿ.
ಹೀಗೆ ಹೇಳುವುದಕ್ಕೂ ಅರ್ಥವಿದೆ. ನಮ್ಮ ಮೆದುಳು ಅತೀ ಹೆಚ್ಚು ಚುರುಕಾಗಿ ಕೆಲಸ ಮಾಡುವುದು ಬೆಳಗಿನ ಅವಧಿಯಲ್ಲೇ ಎಂದು ತಜ್ಞರು ಹೇಳುತ್ತಾರೆ.
ಬೆಳಗಿನ ಅವಧಿಯಲ್ಲಿ ಚುರುಕಾಗಿ ಕೆಲಸ ಮಾಡುವುದರಿಂದ ಆ ಸಂದರ್ಭದಲ್ಲಿಯೇ ಅತ್ಯಂತ ಕಠಿಣ ಕೆಲಸ ಮಾಡಲು ಸರಿಯಾದ ಸಮಯ ಎಂದು ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತಲೂ ಹೆಚ್ಚು ಚುರುಕಾಗಿ ಕೆಲಸ ಮಾಡುವುದು ನಾವು ನಿದ್ರಿಸುತ್ತಿರುವಾಗ! ಅಚ್ಚರಿಯೆನಿಸಿದರೂ ಇದು ಸತ್ಯ. ಈ ಸಂದರ್ಭದಲ್ಲಿ ನಮ್ಮ ಮೆದುಳು ಹೆಚ್ಚು ಚುರುಕಾಗಿರುತ್ತದಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.