ಬೆಂಗಳೂರು: ಇನ್ನೂ ಮಳೆಗಾಲ ನಿಂತಿಲ್ಲ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶೀತ, ಜ್ವರ, ಕೆಮ್ಮು ಸಮಸ್ಯೆ ಸಾಮಾನ್ಯವಾಗಿದೆ. ಮಳೆಗಾಲದ ಖಾಯಿಲೆಗಳಿಂದ ರಕ್ಷಿಸಿಕೊಳ್ಳಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನು ಸೇವಿಸಿದರೆ ಒಳಿತು ನೋಡೋಣ.
ಸೂಪ್ ಗಳು
ಟೊಮೆಟೊ, ಕಾರ್ನ್, ಚಿಕನ್ ಸೂಪ್ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಚಿಕನ್ ನಲ್ಲಿರುವ ಅಮಿನೋ ಆಸಿಡ್ ನಮ್ಮ ಶ್ವಾಸಕೋಶದಲ್ಲಿ ತುಂಬಿರುವ ಕಫ ಹೋಗಲಾಡಿಸುತ್ತದೆ.
ವಿಟಮಿನ್ ಸಿ ಹಣ್ಣುಗಳು
ಕಿತ್ತಳೆ, ನಿಂಬೆ ಹಣ್ಣು ಮುಂತಾದ ಹುಳಿಯುಕ್ತ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚು. ಇವುಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಬಿಸಿ ಪಾನೀಯಗಳು
ಆದಷ್ಟು ಬಿಸಿ ಪಾನೀಯ ಸೇವಿಸುವುದರಿಂದ ನಮ್ಮ ಗಂಟಲು ಕೆರೆತ ದೂರವಾಗುವುದು. ಗ್ರೀನ್ ಟೀ ಸೇವನೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಅರಶಿನ
ಹಾಲು ಕುಡಿಯುವಾಗ ಒಂಟು ಚಿಟಿಕೆ ಅರಶಿನ ಪುಡಿ ಹಾಕಿ ಕುಡಿದರೂ ಸಾಕು. ಶೀತ ಸಂಬಂಧೀ ರೋಗಗಳಿಗೆ ಅರಶಿನ ಸೇವನೆ ಒಳ್ಳೆಯದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ