ಬೆಂಗಳೂರು: ಒತ್ತಡದ ಜೀವನ ಶೈಲಿಯಿಂದಾಗಿ ಹಲವರು ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುತ್ತಾರೆ. ಈ ಅಸಹನೀಯ ನೋವಿಗೆ ಕೆಲವು ಮನೆ ಮದ್ದುಗಳಿವೆ. ಅವು ಯಾವುವು ನೋಡೋಣ.
ದ್ರಾಕ್ಷಿ ಜ್ಯೂಸ್
ದ್ರಾಕ್ಷಿ ಹಣ್ಣಿಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ಮಿಕ್ಸಿಯಲ್ಲಿ ರುಬ್ಬಿ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ ನ್ನು ದಿನಕ್ಕೆರಡು ಬಾರಿ ಕುಡಿಯುತ್ತಾ ಬಂದರೆ ಮೈಗ್ರೇನ್ ಗೆ ಪರಿಹಾರ ಸಿಗುವುದು.
ಶುಂಠಿ
ಸಾಮಾನ್ಯ ಮೈ ಕೈನೋವಿಗೂ ಪರಿಹಾರ ನೀಡುವ ಶುಂಠಿ ಮೈಗ್ರೇನ್ ತಲೆನೋವನ್ನೂ ಶಮನ ಮಾಡುವುದು. ನಿಂಬೆ ಜ್ಯೂಸ್ ಗೆ ಅಥವಾ ಚಹಾ ಜತೆಗೆ ಶುಂಠಿ ರಸ ಹಾಕಿಕೊಂಡು ಕುಡಿಯುವುದು ಒಳ್ಳೆಯದು.
ಚಕ್ಕೆ
ಮೈಗ್ರೇನ್ ತಲೆನೋವು ಬರುವಾಗ ಚಕ್ಕೆಯನ್ನು ನೀರಿನ ಜತೆಗೆ ರುಬ್ಬಿಕೊಂಡು ಪೇಸ್ಟ್ ಮಾಡಿ ಹಣೆಗೆ ಹಚ್ಚಿಕೊಂಡು ನೋಡಿ. ಬಿಸಿ ನೀರಿನ ಜತೆಗೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳುವುದರಿಂದ ನೋವಿಗೆ ಪರಿಹಾರ ಸಿಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ