ಕೆಲವರು ಕೆಲಸದ ಬ್ಯುಸಿಯಲ್ಲಿ ತಡೆದುಕೊಂಡರೆ ಒಂದಷ್ಟು ಮಂದಿ ಸುಖಾಸುಮ್ಮನೆ ಬಾಯಾರಿಕೆ ಆಗಿದ್ದರೂ ಅದನ್ನು ತಡೆದುಕೊಳ್ಳುತ್ತಾರೆ.
ಸಾಮಾನ್ಯವಾಗಿ ಬಾಯಾರಿಕೆ ತಡೆದುಕೊಳ್ಳೋಕೆ ಯಾರೂ ಮುಂದಾಗಬಾರದು. ಏಕೆಂದರೆ ಇದರಿಂದ ನಷ್ಟವೇ ಹೆಚ್ಚು.
ಬಾಯಾರಿಕೆಯನ್ನು ಬಲವಂತವಾಗಿ ತಡೆದುಕೊಂಡರೆ ಆಗ ದೇಹದಲ್ಲಿ ಶಿಥಿಲತೆ ಕಾಣಿಸಿಕೊಂಡು ದೇಹ ದುರ್ಬಲವಾಗುತ್ತಾ ಸಾಗುತ್ತದೆ.
ಬಾಯಿ ಒಣಗಲು ಪ್ರಾರಂಭಿಸುತ್ತದೆ. ಈ ನಿರಂತರ ಪ್ರಕ್ರಿಯೆ ಕಿವುಡುತನಕ್ಕೂ ಕಾರಣವಾಗಬಲ್ಲದು.
ಕಣ್ಣಿನ ಸಮಸ್ಯೆಗೆ ಮೂಲವಾಗುವುದಲ್ಲದೇ ಧಾತುಗಳ ಸಂಖ್ಯೆಯೂ ಕ್ಷೀಣಿಸಬಹುದು.