ಬೆಂಗಳೂರು : ಬೇಸಿಗೆ ಕಾಲದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ನಮ್ಮ ದೇಹದ ಉಷ್ಣಾಂಶ ಕೂಡ ಹೆಚ್ಚಾಗುತ್ತದೆ. ಇದರಿಂದ ಚರ್ಮ ಡ್ರೈಯಾಗುತ್ತದೆ. ಈ ಬೇಸಿಗೆಕಾಲದಲ್ಲಿ ನಿಮ್ಮ ದೇಹದ ಉಷ್ಣಾಂಶ ಸಮತೋಲನದಲ್ಲಿರಬೇಕೆಂದರೆ ಈ ಮನೆಮದ್ದುಗಳನ್ನು ಬಳಸಿ.
ದಾಳಿಂಬೆ ರಸ : ಪ್ರತಿದಿನ ಬೆಳಿಗ್ಗೆ 1 ಲೋಟ ದಾಳಿಂಬೆ ರಸಕ್ಕೆ 3 ಹನಿ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ದೇಹದ ತಾಪಮಾನವನ್ನು ಸಮತೋಲನದಲ್ಲಿಡಬಹುದು.
ನೀರು: ನೀರನ್ನು ಸರಿಯಾಗಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಹಾಗೇ ನಿಮ್ಮ ಪಾದವನ್ನು ನೀರಿನಲ್ಲಿ ಮುಳುಗಿಸಿ ಇಡುವುದರಿಂದಲೂ ದೇಹದ ತಾಪಮಾನ ಕಡಿಮೆಯಾಗುತ್ತದೆ.
ಗಸಗಸೆ : ನಿತ್ಯ ಮಲಗುವ ಮೊದಲು 1 ಹಿಡಿ ಗಸಗಸೆ ಜಗಿದು ತಿಂದರೆ ದೇಹದ ತಾಪಮಾನ ಹತೋಟಿಯಲ್ಲಿರುತ್ತದೆ.
ಮೆಂತ್ಯ : ಮೆಂತ್ಯವನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ.
ಹಾಲು ಜೇನು : 1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೇರೆಸಿ ಸೇವಿಸಿದರೆ ದೇಹದ ಉಷ್ಣಾಂಶ ಹೆಚ್ಚಾಗುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.