ಬೆಂಗಳೂರು : ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಅದರಲೂ ಹೆಚ್ಚಾಗಿ ಅವರು ಸರಿಯಾಗಿ ನೀರು ಕುಡಿಯದೇ ಇದ್ದರೆ ಮೂತ್ರದ ಸಮಸ್ಯೆ, ಮಲಬದ್ದತೆ ಮುಂತಾದ ಸಮಸ್ಯೆ ಕಾಡುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಮಕ್ಕಳ ದೇಹ ತಂಪಾಗಿ, ಆರೋಗ್ಯವಾಗಿರಲು ಈ ಪಾನೀಯಗಳನ್ನು ಕುಡಿಸಿರಿ.
ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ಎಳನೀರನ್ನು ಹೆಚ್ಚಾಗಿ ಕುಡಿಸಿ. ಇದರಲ್ಲಿ ಮಿನರಲ್ಸ್ ಪ್ರಮಾಣ ಜಾಸ್ತಿ ಇರುತ್ತದೆ. ಬೇಸಿಗೆಯಲ್ಲಿ ಮಧ್ಯಾಹ್ನದ ವೇಳೆ ಮಕ್ಕಳಿಗೆ ಮನೆಯಲ್ಲಿಯೇ ಕಿತ್ತಳೆ ಹಣ್ಣಿನ ಜ್ಯೂಸ್ ಮಾಡಿ ಕುಡಿಯಲು ಕೊಡಿ. ಇದು ದೇಹವನ್ನು ತಂಪಾಗಿರಿಸುತ್ತದೆ.
ಮಕ್ಕಳಿಗೆ ವಾರಕ್ಕೊಮ್ಮೆ ಹೆಸರುಕಾಳಿನ ಜ್ಯೂಸ್ ಮಾಡಿ ಕುಡಿಸಿರಿ. ಇದರಲ್ಲಿ ಪ್ರೋಟೀನ್ ಹೆಚ್ಚಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಹಾಗೇ ಬಿಸಿಲ ಧಗೆಯಿಂದ ದೇಹವನ್ನು ರಕ್ಷಿಸಲು ಮಜ್ಜಿಗೆಯನ್ನು ಕುಡಿಯಿರಿ. ಇದು ದೇಹವನ್ನು ತಂಪಾಗಿಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ