Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಈ ಮನೆಮದ್ದನ್ನು ಬಳಸಿ

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಶುಕ್ರವಾರ, 5 ಏಪ್ರಿಲ್ 2019 (13:27 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿರುವುದರಿಂದ ನಮ್ಮ ದೇಹದ ಉಷ್ಣಾಂಶ ಕೂಡ ಹೆಚ್ಚಾಗುತ್ತದೆ. ಇದರಿಂದ ಚರ್ಮ ಡ್ರೈಯಾಗುತ್ತದೆ. ಈ ಬೇಸಿಗೆಕಾಲದಲ್ಲಿ ನಿಮ್ಮ ದೇಹದ ಉಷ್ಣಾಂಶ ಸಮತೋಲನದಲ್ಲಿರಬೇಕೆಂದರೆ ಈ ಮನೆಮದ್ದುಗಳನ್ನು ಬಳಸಿ.


ದಾಳಿಂಬೆ ರಸ : ಪ್ರತಿದಿನ ಬೆಳಿಗ್ಗೆ 1 ಲೋಟ ದಾಳಿಂಬೆ ರಸಕ್ಕೆ 3 ಹನಿ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ದೇಹದ ತಾಪಮಾನವನ್ನು ಸಮತೋಲನದಲ್ಲಿಡಬಹುದು.

ನೀರು: ನೀರನ್ನು ಸರಿಯಾಗಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಹಾಗೇ ನಿಮ್ಮ ಪಾದವನ್ನು ನೀರಿನಲ್ಲಿ ಮುಳುಗಿಸಿ ಇಡುವುದರಿಂದಲೂ ದೇಹದ ತಾಪಮಾನ ಕಡಿಮೆಯಾಗುತ್ತದೆ.

ಗಸಗಸೆ : ನಿತ್ಯ ಮಲಗುವ ಮೊದಲು 1 ಹಿಡಿ ಗಸಗಸೆ ಜಗಿದು ತಿಂದರೆ ದೇಹದ ತಾಪಮಾನ ಹತೋಟಿಯಲ್ಲಿರುತ್ತದೆ.

ಮೆಂತ್ಯ : ಮೆಂತ್ಯವನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ.

ಹಾಲು ಜೇನು : 1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೇರೆಸಿ ಸೇವಿಸಿದರೆ  ದೇಹದ ಉಷ್ಣಾಂಶ ಹೆಚ್ಚಾಗುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯ ಗುಪ್ತಾಂಗದ ನೋವಿಗೆ ಹೀಗೆ ಮಾಡಿ…!