Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಯಿಯ ಸುತ್ತಲಿನ ಸ್ಕೀನ್ ಸುಕ್ಕುಗಟ್ಟುವುದನ್ನು ತಡೆಯಲು ಇವುಗಳನ್ನು ಬಳಸಿ

ಬಾಯಿಯ ಸುತ್ತಲಿನ ಸ್ಕೀನ್ ಸುಕ್ಕುಗಟ್ಟುವುದನ್ನು ತಡೆಯಲು ಇವುಗಳನ್ನು ಬಳಸಿ
ಬೆಂಗಳೂರು , ಶುಕ್ರವಾರ, 7 ಜೂನ್ 2019 (08:09 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಚರ್ಮಗಳು ಸುಕ್ಕುಗಟ್ಟಲು ಶುರುವಾಗುತ್ತದೆ. ಅದರಲ್ಲೂ ಬಾಯಿಯ ಸುತ್ತವಿರುವ ಚರ್ಮ ಬೇಗ ಸುಕ್ಕುಗಟ್ಟುತ್ತದೆ. ಇದು ನಿಮಗೆ ವಯಸ್ಸಾಗಿದ್ದು ಎದ್ದು ಕಾಣುವಂತೆ ಮಾಡುತ್ತದೆ.ಅಲ್ಲದೆ ಇದರಿಂದ ನಿಮ್ಮ ಅಂದ ಕೂಡ ಕೆಡುತ್ತದೆ. ಹೀಗೆ ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಯಲು ಇವುಗಳನ್ನು ಬಳಸಿ.




*ಆಲೋವೆರಾ ಜೆಲ್ ತ್ವಚೆಯನ್ನು ನೈಸರ್ಗಿಕವಾಗಿ ಮತ್ತು ಆಳವಾಗಿ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಇದನ್ನು ತ್ವಚೆಗೆ ಹಚ್ಚಿ 30 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಅದನ್ನು ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡಿದಾಗ ಸುಕ್ಕುಗಳು ಕಾಣಿಸಿಕೊಳ್ಳುವುದಿಲ್ಲ.


*ಆಲಿವ್ ಆಯಿಲ್ ಅಪಾರ ಪ್ರಮಾಣದ ವಿಟಮಿನ್ ಇ  ಒಳಗೊಂಡಿರುತ್ತದೆ. ವಿಟಮಿನ್ ಇ ತ್ವಚೆಯ ಪೋಷಣೆಯಲ್ಲಿ ಬಹಳ ಉಪಯುಕ್ತವಾದದ್ದು, ಆದ್ದರಿಂದ ರಾತ್ರಿ ಮಲಗುವ ಮುನ್ನ ಆಲಿವ್ ಎಣ್ಣೆಯನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಬೆಳಗ್ಗೆ ಎದ್ದಮೇಲೆ ಉಗುರುಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.


*ಟೊಮೆಟೊ ರಸ ದಲ್ಲಿ ವಿಟಮಿನ್ ಎ, ವಿಟಮಿನ್ ಬಿ6, ವಿಟಮಿನ್ ಸಿ, ಲೈಕೋಪೆನ್ ಮತ್ತು ಬೀಟಾ-ಕೆರೋಟಿನ್ ಇರುತ್ತದೆ. ಟೊಮೇಟೊ ರಸವನ್ನು ನಿಮ್ಮ ತ್ವಚೆಯ ಮೇಲೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತಿನ ನಂತರ ನೀರಿನಿಂದ ತೊಳೆಯಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್ ಸ್ಕ್ರೀನ್ ಬಿದ್ದಿರುವ ಗೆರೆಗಳನ್ನುಇದರಿಂದ ಕ್ಲೀನ್ ಮಾಡಿದರೆ ಸ್ಕ್ರೀನ್ ಗಾರ್ಡ್ ಫಳಫಳ ಹೊಳೆಯುತ್ತದೆ