ಬೆಂಗಳೂರು : ಗೋಧಿ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಗೋಧಿಯಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಅದು ಹೇಗೆ ಎಂಬುದು ಇಲ್ಲಿದೆ ನೋಡಿ.
ಗೋಧಿ ಮೊಳಕೆಯಿಂದ ಮಾಡಿದ ತೈಲದಲ್ಲಿ ವಿಟಮಿನ್- ಬಿ6, ವಿಟಮಿನ್ ಇ, ಫಾಲಿಕ್ ಆಸಿಡ್ ಇರೋದ್ರಿಂದ ಇದು ವಯಸ್ಸಾಗಿದ್ದರೂ ನಿಮ್ಮ ಚರ್ಮ ಸುಕ್ಕುಗಟ್ಟದಂತೆ ಕಾಪಾಡುತ್ತದೆ. ಡ್ರೈ ಸ್ಕಿನ್, ಸೋರಿಯಾಸಿಸ್ ನಂತಹ ಸಮಸ್ಯೆಗಳು ಬರುವುದಿಲ್ಲ. ತೈಲದಲ್ಲಿರುವ ವಿಟಮಿನ್ ಬಿ ಅಂಗಾಂಶ ಹಾನಿಯನ್ನು ತಪ್ಪಿಸುತ್ತದೆ.
ಇದರಲ್ಲಿ ಲಿನೊಲಿಯಿಕ್ ಆಮ್ಲ ಇರುವುದರಿಂದ ನಿಮ್ಮ ಕೂದಲ ಪೋಷಣೆಗೆ ಸಹಕರಿಸುತ್ತದೆ. ಎಳ್ಳೆಣ್ಣೆ ಅಥವಾ ಆಲಿವ್ ಆಯಿಲ್ ಜೊತೆಗೆ 10 ರಲ್ಲಿ ಒಂದು ಭಾಗದಷ್ಟು ಗೋಧಿ ಮೊಳಕೆ ತೈಲವನ್ನು ಮಿಕ್ಸ್ ಮಾಡಿ ಕೂದಲ ಬುಡಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಬಿಟ್ಟು ತಲೆಸ್ನಾನ ಮಾಡಿ.
ಗೋಧಿ ಮೊಳಕೆ ತೈಲದಲ್ಲಿ ವಿಟಮಿನ್-ಇ ಹೇರಳವಾಗಿರುವುದರಿಂದ ನಿರಂತರವಾಗಿ ಈ ಎಣ್ಣೆಯನ್ನು ಹಚ್ಚುತ್ತಾ ಬಂದರೆ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತವೆ. ಹಾಗೇ ಗೋಧಿ ಮೊಳಕೆಯ ಎಣ್ಣೆಯಿಂದ ಮುಖಕ್ಕೆ ಮಸಾಜ್ ಅಥವಾ ಫೇಸ್ ಪ್ಯಾಕ್ ಮಾಡಿಕೊಂಡರೆ ಮುಖ ಮೃದುವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.