ಬೆಂಗಳೂರು : ಹಾಲು ಒಡೆದು ಹೋದಾಗ ಅದನ್ನು ಹೊರಗೆ ಚೆಲ್ಲುತ್ತೇವೆ. ಆದರೆ ಇನ್ನು ಮುಂದೆ ಈ ರೀತಿ ಮಾಡಬೇಡಿ. ಯಾಕೆಂದರೆ ಒಡೆದ ಹಾಲಿನಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆಯಂತೆ. ಅಲ್ಲದೇ ಇದರಿಂದ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದಂತೆ.
ಹೌದು. ಒಡೆದ ಹಾಲಿನ ನೀರಿನಲ್ಲಿ ಪ್ರೋಟೀನ್ ಗಳ ಪ್ರಮಾಣವು ತುಂಬಾ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿಯು ಅಧಿಕವಾಗಿದೆಯಂತೆ. ಅದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಒಡೆದ ಹಾಲಿನ ನಿಯಮಿತ ಸೇವನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಎಂದು ಹಲವು ಸಂಶೋಧನೆಯಿಂದ ತಿಳಿದುಬಂದಿದೆ.
ಒಡೆದ ಹಾಲಿನಿಂದ ರಸ್ ಗುಲ್ಲಾ ಹಾಗೂ ಪನ್ನೀರ್ ಮಾಡಬಹುದು. ಅಲ್ಲದೇ ಒಡೆದ ಹಾಲಿನ ನೀರಿಗೆ ಕಡಲೆಹಿಟ್ಟು, ಅರಿಶಿನ ಮತ್ತು ಗಂಧದ ಪುಡಿ ಸೇರಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆಯಂತೆ.
ಹಾಗೇ ನೀವು ಚಪಾತಿ, ರೊಟ್ಟಿ ಹಿಟ್ಟನ್ನು ಕಲಸುವಾಗ ಈ ಒಡೆದ ಹಾಲಿನ ನೀರನ್ನು ಬಳಸುವುದರಿಂದ ಅದು ಮೃದುವಾಗುವುದಲ್ಲದೆ, ರುಚಿ ಕೂಡಾ ಹೆಚ್ಚಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.