Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?

ಬೇಸಿಗೆಯಲ್ಲಿ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 18 ಏಪ್ರಿಲ್ 2019 (07:59 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯ ಹಾಳಾಗುವುದರ ಜೊತೆಗೆ ನಮ್ಮ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ ಕಂಡುಬರುವುದರಿಂದ ಆ ಬಗ್ಗೆ ಕೆಲವು ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳಬೇಕು.


*ಬೇಸಿಗೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮೊಡವೆಗಳಿಂದ ದೂರವಿರಬಹುದು.


* ಚರ್ಮ ಒಣಗಿ ಸುಕ್ಕು ಕಟ್ಟುವುದನ್ನು ತಡೆಗಟ್ಟಲು ಪ್ರತಿದಿನ ಎರಡು ಬಾರಿ ಒಂದು ಬಟ್ಟಲು ಮೊಸರಿಗೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಸೇರಿಸಿ ಕುಡಿಯಬೇಕು.


*ಕಾಫಿ - ಟೀಗಳಿಗಿಂತ ಜ್ಯೂಸನ್ನು ಸೇವಿಸಿದರೆ ಮೈಯನ್ನು ತಂಪಾಗಿಡಬಹುದು.


*ಸಾಧ್ಯವಾದಷ್ಟು ಕಾಟನ್ ಉಡುಪನ್ನೇ ಧರಿಸಿ. ಇದರಿಂದ ದೇಹದ ಉಷ್ಣವನ್ನು ತಡೆಯಬುದು.

*ಕೂದಲನ್ನು ಬಿಚ್ಚಿ ಬಿಡುವುದರಿಂದ ಬೆವರುವುದು ಜಾಸ್ತಿಯಾಗುತ್ತದೆ, ಕೂದಲನ್ನು ಪೋನಿಟೈಲ್ ಅಥವಾ ಜಡೆ ಹೆಣೆಯಿರಿ.

*ಸಂಜೆಯ ತಿಂಡಿಗೆ ಕರಿದ ಪದಾರ್ಥಗಳಿಗಿಂತ ಫ್ರೂಟ್ ಸಲಾಡ್, ವೆಜಿಟೇಬಲ್ ಸಲಾಡ್ಗಳನ್ನು ತಿನ್ನುವುದು ಒಳ್ಳೆಯದು.

*ಬೇಸಿಗೆಯಲ್ಲಿ ತಣ‍್ಣೀರಿನ ಸ್ನಾನ ಹಿತಕರವೆನಿಸಿದರೂ ಉಗುರುಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು..

*ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಿ. ಹಾಗೆ ಹೋಗಲೇ ಬೇಕಾದರೆ ಕ್ಯಾಪ್, ಸ್ಕಾರ್ಫ್ ಧರಿಸಿ ಇಲ್ಲವೇ ಕೊಡೆಯನ್ನು ಬಳಸುವುದು ಉತ್ತಮ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ಬದಲು ಈ ಮನೆಮದ್ದನ್ನು ಬಳಸಿ ಸಂಪೂರ್ಣ ಲೈಂಗಿಕ ಸುಖ ಅನುಭವಿಸಿ