ಬೆಂಗಳೂರು : ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಗಳಲ್ಲಿ ಕೆಮಿಕಲ್ ಇರುತ್ತದೆ. ಟೂತ್ ಪೇಸ್ಟ್ ಗಳಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಮನೆಯಲ್ಲೇ ಟೂತ್ ಪೇಸ್ಟ್ ಗಳನ್ನು ತಯಾರಿಸಿ ಉಪಯೋಗಿಸುವುದರಿಂದ ಹಲ್ಲು ಮತ್ತು ವಸಡಿಗೆ ತುಂಬಾ ಒಳ್ಳೆಯದು.
ಅಡುಗೆ ಸೋಡಾ 1 ಚಮಚ, ಕಲ್ಲುಪ್ಪು ಪುಡಿ ಮಾಡಿದ್ದು ½ ಚಮಚ, ಪೆಪ್ಪರ್ ಮೆಂಟ್ ಆಯಿಲ್ 2 ಹನಿ ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಬ್ರೇಶ್ ಹಾಕಿಕೊಂಡು ಹಲ್ಲುಚ್ಚಿ. ಇದರಿಂದ ಹಲ್ಲು ಬಿಳಿಯಾಗುವುದರ ಜೊತೆಗೆ ಆರೋಗ್ಯವಾಗಿಯು ಇರುತ್ತದೆ.
ಕೊಬ್ಬರಿ ಎಣ್ಣೆ 1 ದೊಡ್ಡ ಚಮಚ, ಅರಿಶಿನ 1 ಚಮಚ, ಪೆಪ್ಪರ್ ಮೆಂಟ್ ಆಯಿಲ್ 2 ಹನಿ ಇವು ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಬ್ರೇಶ್ ಮಾಡಿ.
ಕೊಬ್ಬರಿ ಎಣ್ಣೆ- 3 ಚಮಚ, ಅಡುಗೆ ಸೋಡಾ- 3 ಚಮಚ, ಕಹಿಬೇವು ಪುಡಿ(ಕಹಿಬೇವು ಸೊಪ್ಪಿನ ಪೇಸ್ಟ್)- 1 ಚಮಚ, ಪೆಪ್ಪರ್ ಮೆಂಟ್ ಆಯಿಲ್- 12 ಹನಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿದರೆ ಟೂತ್ ಪೇಸ್ಟ್ ರೆಡಿಯಾಗುತ್ತದೆ. ಈ ಮೂರು ಟಿಪ್ಸ್ ಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ಬ್ರೇಶ್ ಮಾಡಿದರೆ ಹಲ್ಲು ಮತ್ತು ವಸಡು ತುಂಬ ಆರೋಗ್ಯವಾಗಿರುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ