Publish Date: Thu, 28 Mar 2019 (12:06 IST)
Updated Date: Thu, 28 Mar 2019 (12:07 IST)
ಬೆಂಗಳೂರು: ಮೊದಲನೆಯ ರಾತ್ರಿ ಎನ್ನುವ ಪದ ಎಲ್ಲಾ ವಿವಾಹಿತ ಜೋಡಿಗಳ ಮೈ ರೋಮಾಂಚನಗೊಳಿಸುವ ರಾತ್ರಿ. ಆದರೆ ಆ ದಿನ ಎಂದೂ ಮರೆಯದ ಅದ್ಭುತ ರಾತ್ರಿಯಾಗಬೇಕಾದರೆ ಏನು ಮಾಡಬೇಕು?
ಕಣ್ಣಲ್ಲಿ ಕಣ್ಣಿಟ್ಟು ನೋಡಿ
ಮೊದಲನೆಯ ರಾತ್ರಿ ಗಂಡ-ಹೆಂಡತಿಯಾಗಿ ಕಳೆಯುವ ಮೊದಲನೆಯ ದಿನ. ಆ ದಿನ ಯಾರ ಅಡಚಣೆಯೂ ನಿಮಗಿರದು. ಹಾಗಾಗಿ ಕೆಲ ಹೊತ್ತು ಸಂಗಾತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕಾಲ ಕಳೆಯಿರಿ. ಕಣ್ಣಂಚಿನ ಮಾತು ನಿಮ್ಮನ್ನು ಮತ್ತಷ್ಟು ಹತ್ತಿರವಾಗಿಸುತ್ತದೆ.
ಫ್ಲರ್ಟ್ ಮಾಡಿ
ಮೊದಲನೆಯ ರಾತ್ರಿ ಪ್ರೇಮಿಗಳಂತೆ ಪರಸ್ಪರ ಫ್ಲರ್ಟ್ ಮಾಡಿ. ಆಗ ನಿಮ್ಮ ಮನಸ್ಸಿನ ಜತೆಗೆ, ದೇಹವೂ ಹತ್ತಿರವಾಗುತ್ತದೆ. ನೀವು ಲೈಂಗಿಕ ಕ್ರಿಯೆಗೆ ಮಾನಸಿಕವಾಗಿ ತಯಾರಾದಂತಾಗುತ್ತದೆ.
ಚೆನ್ನಾಗಿ ಅಲಂಕರಿಸಿ
ಹೆಣ್ಣು ಚೆನ್ನಾಗಿ ಅಲಂಕರಿಸಿ ರೂಂನೊಳಗೆ ಕಾಲಿಟ್ಟರೆ ಯಾವ ಗಂಡು ತಾನೇ ಕಣ್ಮುಚ್ಚಿ ಕೂರುತ್ತಾನೆ. ಹಾಗಂತ ದಸರಾ ಗೊಂಬೆಗೆ ಅಲಂಕಾರ ಮಾಡಿದ ಹಾಗೆ ವಿಪರೀತ ಆಭರಣ ತೊಟ್ಟು ಹೋಗಬೇಡಿ. ಸರಳವಾಗಿ ಸುಂದರವಾಗಿ ಅಲಂಕರಿಸಿಕೊಂಡು ಹೋಗಿ.
ಆತುರ ಬೇಡ
ಎಲ್ಲವನ್ನೂ ಇಂದೇ ಮುಗಿಸಿ ಬಿಡುತ್ತೇನೆ ಎಂಬ ಆತುರ ಬೇಡ. ನಿಧಾನವಾಗಿ ಸಂಗಾತಿಯನ್ನು ಪಕ್ಕಕ್ಕೆ ಎಳೆದುಕೊಳ್ಳಿ. ನಿಧಾನವಾಗಿ ಆಕೆಯ ದೇಹ ಸ್ಪರ್ಶಿಸಿ ಇದರಿಂದ ಸಂಗಾತಿಯೂ ಖುಷಿಯಾಗುತ್ತಾಳೆ. ಒರಟಾಗಿ ವರ್ತಿಸಬೇಡಿ. ಸ್ವಲ್ಪ ಸೆಂಟಿಮೆಂಟಲ್ ಆಗಿರಿ. ಹಾಗೆಯೇ ಆಕೆಯ ಜತೆಗೆ ನಾನಿದ್ದೇನೆ ಎಂಬ ಭಾವನೆ ಕೊಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ