ಬೆಂಗಳೂರು: ಕೆಲವೊಂದು ಮನೆಗಳಲ್ಲಿ ಮಗ-ಸೊಸೆಯ ಖಾಸಗಿ ಬದುಕಿನಲ್ಲೂ ತೀರಾ ಮೂಗು ತೂರಿಸುವ ಅತ್ತೆಯಂದಿರುತ್ತಾರೆ. ಇದು ಸೊಸೆಗೆ ತೀರಾ ಮುಜುಗರ ತರಬಹುದು.
ಪದೇ ಪದೇ ನೀವು ಗಂಡ ಹೆಂಡತಿ ಹೇಗಿದ್ದೀರಿ ಎಂದು ಪ್ರಶ್ನೆ ಮಾಡುವುದು, ಮಗ-ಸೊಸೆ ಖಾಸಗಿಯಾಗಿದ್ದಾಗ ಕೋಣೆಗೆ ಇಣುಕಿ ನೋಡುವ ಅತ್ತೆಯಂದಿರಿಂದನ್ನು ಪಾರಾಗುವುದು ಹೇಗೆ ಎಂದು ಕೆಲವು ಹೆಣ್ಣು ಮಕ್ಕಳು ಚಿಂತೆ ಮಾಡ್ತಾರೆ.
ಇದಕ್ಕಿರುವ ಬೆಸ್ಟ್ ಉಪಾಯವೆಂದರೆ, ನೇರವಾಗಿ ಹೇಳುವುದು. ಯಾರಿಗೇ ಆಗಲೀ ನಿಮ್ಮ ಖಾಸಗಿ ಬದುಕಿನ ಗುಟ್ಟನ್ನು ಬಹಿರಂಗಗೊಳಿಸಬೇಕಾಗಿಲ್ಲ. ನಿಮ್ಮ ಖಾಸಗಿ ಕ್ಷಣಗಳನ್ನು ಆಗಾಗ ಅತ್ತೆ ಕೇಳುತ್ತಿದ್ದರೆ, ನೇರವಾಗಿ ಹೀಗೆ ಕೇಳುವುದು ನನಗಿಷ್ಟವಿಲ್ಲ ಎಂದು ಹೇಳಿಬಿಡಿ. ಇದರಲ್ಲಿ ನಿಷ್ಠುರವಾಗುವಂತದ್ದು ಏನೂ ಇಲ್ಲ.
ಒಂದು ವೇಳೆ ನಿಮ್ಮ ಪತಿ ನಿಮ್ಮ ಮಾತಿಗೆ ಬೆಲೆ ಕೊಡುವವರಾಗಿದ್ದರೆ, ಅವರೊಂದಿಗೆ ಈ ವಿಚಾರವನ್ನು ನೇರವಾಗಿ ಹಂಚಿಕೊಳ್ಳಿ. ಇದರಿಂದ ನಿಮ್ಮ ಖಾಸಗಿ ಬದುಕಿಗೆ ಕಿರಿ ಕಿರಿ ಆಗುತ್ತದೆ ಎಂದು ಸಮಾಧಾನವಾಗಿ ಹೇಳಿ. ಮನೆಯಲ್ಲಿ ಬೇರೆ ಯಾರಾದರೂ ಸದಸ್ಯರಿಗೆ ಅತ್ತೆ ಕಿವಿಗೊಡುವವರಿದ್ದರೆ ಅವರಿಗೆ ನಿಮ್ಮ ಸಮಸ್ಯೆಯನ್ನು ಹೇಳಿ ಸಹಾಯ ಪಡೆಯಿರಿ. ಈ ವಿಚಾರದಲ್ಲಿ ಯಾವುದೇ ಸಂಕೋಚ ಬೇಕಾಗಿಲ್ಲ. ಯಾಕೆಂದರೆ ಎಷ್ಟೋ ಸಂಬಂಧಗಳು ಈ ವಿಚಾರಕ್ಕೆ ಮುರಿದುಬಿದ್ದಿದ್ದೂ ಇದೆ! ಹಾಗಾಗಿ ಸಂಕೋಚ ಬೇಡ, ನಿಷ್ಠುರವಾಗಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ