ಬೆಂಗಳೂರು: ಇಂಗು ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ಬಳಕೆ ವಸ್ತು. ಇದರಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ. ಇಂಗು ತಿನ್ನುವುದರ ಮೂರು ಲಾಭಗಳು ಏನೇನು ನೋಡೋಣ.
ಹೊಟ್ಟೆ ನೋವಿಗೆ
ಇಂಗು ತಿನ್ನುವುದರಿಂದ ಹೊಟ್ಟೆ ನೋವಿಗೆ ಪರಿಹಾರ ಸಿಗುತ್ತದೆ. ಅಜೀರ್ಣ ಅಥವಾ ಅಸಿಡಿಟಿಯಿಂದಾಗಿ ಹೊಟ್ಟೆ ನೋವಾಗುತ್ತಿದ್ದರೆ ಒಂದು ಲೋಟ ಮಜ್ಜಿಗೆಗೆ ಒಂದು ಚಿಟಿಕಿ ಇಂಗು ಸೇರಿಸಿ ಸೇವಿಸಿ.
ಅಸ್ತಮಾಗೆ ಪರಿಹಾರ
ಅಸ್ತಮಾ, ಬ್ರಾಂಕೈಟಿಸ್ ನಂತಹ ಉಸಿರಾಟದ ಸಮಸ್ಯೆಯಿರುವವರು ಹಾಗೂ ಅಲ್ಸರ್, ಎಡೆಬಿಡದ ಕೆಮ್ಮು ಇರುವವರು ಹೆಚ್ಚು ಇಂಗು ಸೇವಿಸುವುದು ಒಳಿತು.
ರಕ್ತದೊತ್ತಡ ಮತ್ತು ಕೊಬ್ಬು
ಇಂಗು ಸೇವಿಸುವುದರಿಂದ ರಕ್ತದೊತ್ತಡ ಮತ್ತು ಕೊಬ್ಬಿನಂಶವನ್ನು ನಿಯಂತ್ರಣದಲ್ಲಿಡಬಹುದು. ಅಷ್ಟೇ ಅಲ್ಲದೆ, ಇದು ಸುಗಮ ರಕ್ತಸಂಚಾರಕ್ಕೆ ಸಹಕರಿಸುವುದರಿಂದ ಹೃದಯದ ರಕ್ತನಾಳಗಳು ಆರೋಗ್ಯವಂತವಾಗಿಡಲು ಉಪಯುಕ್ತ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ