Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!

ಇದು ಸತ್ಯ...ಸೆಕ್ಸ್‌ನಿಂದ ನಿಮ್ಮ ಮೆದುಳು ಚುರುಕಾಗಲಿದೆ!
ಬೆಂಗಳೂರು , ಶನಿವಾರ, 2 ಡಿಸೆಂಬರ್ 2017 (21:37 IST)
ಸಂಗಾತಿಯೊಡನೆ ಅಧಿಕೃತವಾಗಿ ನಡೆಸುವ ಲೈಂಗಿಕ ಸಂಪರ್ಕದಿಂದ ಪುರುಷ ಮತ್ತು ಮಹಿಳೆಯರ ಮೆದುಳಿಗೆ ಹೆಚ್ಚಿನ ಹುರುಪು ದೊರೆಯುತ್ತದೆ ಎಂಬ ಅಂಶವು ಜಪಾನ್‌ ತಜ್ಞರು ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ.
ಲೈಂಗಿಕ ವರ್ತನೆಗೆ ಸಂಬಂಧಪಟ್ಟಂತೆ ಮಹಿಳೆ ಮತ್ತು ಪುರುಷರ ಮೆದುಳಿನ ಕೆಲವು ಭಾಗಗಳಲ್ಲಿ ಬದಲಾವಣೆಯಾಗುತ್ತದೆ ಎಂದು ಸಂಶೋಧನೆ ಸಾಬೀತು ಪಡಿಸಿದೆ. 
 
ಜಪಾನಿನ ಸೈಟಾಮಾ ವಿಶ್ವವಿದ್ಯಾಲಯದ ಶಿಂಜಿ ತ್ಸುಕಾಹಾರಾ ಮತ್ತು ಅವರ ಸಂಗಡಿಗರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಪುರುಷರ ಮೆದುಳಿನ ಭಾಗದಲ್ಲಿ ಮಾರ್ಪಾಡಾಗುವುದನ್ನು ಪತ್ತೆ ಹಚ್ಚಿದ್ದಾರೆ. ಲೈಂಗಿಕ ಕ್ರಿಯೆ ನಡೆಸಿದ ಹಾಗೂ ನಡೆಸದ ಪುರುಷರ ಮೆದುನ್ನು ಕುರಿತು ಅಧ್ಯಯನ ನಡೆಸಿದಾಗ ಈ ಅಂಶ ಪತ್ತೆಯಾಗಿದೆ.
 
ಲೈಂಗಿಕ ಕ್ರಿಯೆ ನಡೆಸಿದವರಲ್ಲಿ ಮೆದುಳಿನ ನರ ಮಂಡಲದ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. 
 
ಮಹಿಳೆಯರನ್ನು ನೋಡಿದ ಕೂಡಲೇ ಪುರುಷರಲ್ಲಿ ಉದ್ರೇಕವುಂಟಾಗುತ್ತದೆ ಇದಕ್ಕೆ ಬೆನ್ನುಹುರಿಯಲ್ಲಿರುವ ಭಾಗವೇ ಕಾರಣ ಎಂದು ತ್ಸುಕಾಹಾರಾ ತಿಳಿಸಿದ್ದಾರೆ.
 
ಈ ಎಲ್ಲ ಕಾರಣಗಳಿಂದಾಗಿ ಯಾವು ರೀತಿ ಲೈಂಗಿಕ ಕ್ರಿಯೆ ನಡೆಸಬೇಕು ಎಂಬುದನ್ನು ಅರಿಯಬೇಕು ಎಂದು ತ್ಸುಕಾಹಾರಾ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಕಂಡೀಷನರ್ ಮನೆಯಲ್ಲೇ ಮಾಡಿ